ಒಮ್ಮೆಯಾದ್ರೂ ನಾವು ಹೊಟೇಲ್ ಗೆ ಹೋಗ್ತೆವೆ. ಹೊಟೇಲ್ ರೂಮ್ ನಲ್ಲಿ ತಂಗುತ್ತೇವೆ. ಹೊಟೇಲ್ ನಲ್ಲಿ ಏನೇನೋ ನಡೆದಿರುತ್ತದೆ. ಆದ್ರೆ ಆ ಬಗ್ಗೆ ನಮಗೆ ಸರಿಯಾಗಿ ತಿಳಿದಿರುವುದಿಲ್ಲ. ಹೊಟೇಲ್ ನ ಸಿಬ್ಬಂದಿ ಒಳಗೆ ಏನೇನು ನಡೆಯುತ್ತೆ ಎಂಬುದನ್ನು ಹೇಳಿದ್ದಾರೆ.
ಹೊಟೇಲ್ ಸಿಬ್ಬಂದಿ ಭಯಾನಕ ಸಂಗತಿ ಬಿಚ್ಚಿಟ್ಟಿದ್ದಾರೆ. ಹೋಟೆಲ್‌ಗಳಲ್ಲಿನ ಹಾಸಿಗೆಗಳಲ್ಲಿ ಕನಿಷ್ಠ ಶೇಕಡಾ 40 ರಷ್ಟು ಸಾವಾಗಿರುತ್ತದೆ ಎಂದವರು ಹೇಳಿದ್ದಾರೆ. ಬಹುಶಃ ನೀವು ಮಲಗಿರುವ ಹಾಸಿಗೆಯ ಮೇಲೆ ಯಾರಾದರೂ ಸತ್ತಿರಬಹುದು. ನಿಸ್ಸಂಶಯವಾಗಿ ಇದು ಹೋಟೆಲ್ ಪ್ರಕಾರ ಮತ್ತು ಗ್ರಾಹಕರ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ವಾರಕ್ಕೆ ಕೇವಲ ಒಂದು ಸಾವು ಸಂಭವಿಸುತ್ತದೆ.
ಜೀವನ ಮುಗಿಸಲೆಂದೇ ಕೆಲವರು ಹೊಟೇಲ್ ರೂಮಿಗೆ ಬರ್ತಾರಂತೆ. ಹೊಟೇಲ್ ರೂಮಿನಲ್ಲಿಯೇ ಅವರ ಜೀವನ ಅಂತ್ಯವಾಗಿರುತ್ತದೆ. ರಜೆ ಹೆಸರಿನಲ್ಲಿ ಹೊಟೇಲ್ ಗೆ ಬರುವ ಜನರು, ಅಲ್ಲಿಯೇ ತಮ್ಮ ಜೀವನ ಮುಗಿಸ್ತಾರೆಂದು ಸಿಬ್ಬಂದಿ ಹೇಳಿದ್ದಾರೆ.
ಹೊಟೇಲ್ ಕೋಣೆಯಲ್ಲಿರುವ ಗ್ಲಾಸಿನ ಬಾಟಲಿಯಲ್ಲಿ ನೀರು ಕುಡಿಯಬೇಡಿ ಎಂದು ಸಿಬ್ಬಂದಿಯೇ ಹೇಳಿದ್ದಾರೆ. ಕೋಣೆಯಲ್ಲಿರುವ ಲೋಟವನ್ನು ಬಾತ್ ರೂಮ್ ಸ್ವಚ್ಛಗೊಳಿಸುವ ಬ್ರೆಷ್ ನಲ್ಲಿಯೇ ಸ್ವಚ್ಛಗೊಳಿಸುತ್ತಾರಂತೆ. ಅದ್ರ ಕ್ಲೀನ್ ಅವರಿಗೆ ಮುಖ್ಯವಲ್ಲ.
ಹೊಟೇಲ್ ಸಿಬ್ಬಂದಿ ಎಂದೂ ಗ್ರಾಹಕರ ವಸ್ತುವನ್ನು ಕದಿಯುವುದಿಲ್ಲವಂತೆ. ಆದ್ರೆ ಗ್ರಾಹಕರು, ಸಿಬ್ಬಂದಿ ಮೇಲೆ ಅನುಮಾನ ಪಡುತ್ತಾರೆ. ನಿಮ್ಮ ಹಳೆ ಐಪ್ಯಾಡ್ ಗಾಗಿ ಅವರು ಎಂದೂ ಕೆಲಸ ಕಳೆದುಕೊಳ್ಳಲು ಇಷ್ಟಪಡುವುದಿಲ್ಲವೆಂದು ಸಿಬ್ಬಂದಿ ಹೇಳಿದ್ದಾರೆ.