ಕೊರೊನಾ ಆತಂಕದ ನಡುವೆಯೇ ಕೇರಳದಲ್ಲಿ ಝಿಕಾ ವೈರಸ್ ಭಯ ಕೂಡ ಶುರುವಾಗಿದೆ. ಐದು ದಿನಗಳ ಹಿಂದಷ್ಟೇ ಮಹಿಳೆಯೊಬ್ಬರಲ್ಲಿ ಝಿಕಾ ವೈರಸ್ ಸೋಂಕು ಕಂಡು ಬಂದಿತ್ತು. ಇದೀಗ ಕೇರಳದಲ್ಲಿ ಇನ್ನೂ ಐದು ಹೊಸ ಝಿಕಾ ಪ್ರಕರಣಗಳು ಬೆಳಕಿಗೆ ಬಂದಿದ್ದು ಒಟ್ಟು ಝಿಕಾ ಸೋಂಕಿತರ ಸಂಖ್ಯೆ 28 ಆಗಿದೆ ಎಂದು ಕೇರಳ ಆರೋಗ್ಯ ಸಚಿವ ವೀಣಾ ಜಾರ್ಜ್ ಹೇಳಿದ್ದಾರೆ.
ಈ ಐದು ಹೊಸ ಝಿಕಾ ಪ್ರಕರಣಗಳಲ್ಲಿ ಇಬ್ಬರು ಸೋಂಕಿತರು ಅನಾಯರಾ, ಹಾಗೂ ಉಳಿದ ಮೂವರು ಕುನ್ನುಕುಜಿ, ಪಾಟ್ಟೋಮ್ ಮತ್ತು ಈಸ್ಟ್ ಫೋರ್ಟ್ಗೆ ಸೇರಿದವರಾಗಿದ್ದಾರೆ. ಸೊಳ್ಳೆಯಿಂದ ಹರಡುತ್ತಿರುವ ಈ ರೋಗವನ್ನ ತಡೆಗಟ್ಟುವ ಸಲುವಾಗಿ ತಿರುವನಂತಪುರಂ ಮುನ್ಸಿಪಾಲ್ ಕಚೇರಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದೆ.
ಕೇರಳದಲ್ಲಿ ಮೊಟ್ಟ ಮೊದಲ ಝಿಕಾ ಪ್ರಕರಣವು ಜುಲೈ 9ರಂದು ಬೆಳಕಿಗೆ ಬಂದಿತ್ತು. ಇದಾದ ಬಳಿಕ ಕೇರಳದ ಎಲ್ಲಾ ಜಿಲ್ಲೆಗಳಲ್ಲಿ ಹೈ ಅರ್ಲಟ್ ಘೋಷಣೆ ಮಾಡಲಾಗಿದೆ.