alex Certify ಹಿಮಪಾತದಿಂದಾಗಿ ಹೆದ್ದಾರಿಯಿಂದ ಬಿದ್ದ ಕ್ಯಾಬ್: ಐವರು ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಮಪಾತದಿಂದಾಗಿ ಹೆದ್ದಾರಿಯಿಂದ ಬಿದ್ದ ಕ್ಯಾಬ್: ಐವರು ಸಾವು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಂದರ್‌ಬಾಲ್ ಜಿಲ್ಲೆಯಲ್ಲಿ ಗುರುವಾರ ಶ್ರೀನಗರದಿಂದ ಕಾರ್ಗಿಲ್‌ ಗೆ ಜನರನ್ನು ಕರೆದೊಯ್ಯುತ್ತಿದ್ದ ಕ್ಯಾಬ್ ಪರ್ವತ ಹೆದ್ದಾರಿಯಿಂದ ಬಿದ್ದು ಐವರು ಸಾವನ್ನಪ್ಪಿದ್ದಾರೆ.

ಇತ್ತೀಚಿನ ಹಿಮಪಾತದಿಂದ ಉಂಟಾದ ಜಾರು ರಸ್ತೆ ಪರಿಸ್ಥಿತಿಯಿಂದಾಗಿ ಶ್ರೀನಗರ-ಲೇಹ್ ಹೆದ್ದಾರಿಯಲ್ಲಿನ ಪರ್ವತಮಯ ಝೋಜಿಲಾ ಪಾಸ್ ರಸ್ತೆಯಿಂದ ಪ್ರಯಾಣಿಕರ ಕ್ಯಾಬ್ ಸ್ಕಿಡ್ ಆಗಿ ಸೋನಾಮಾರ್ಗ್ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ವಾಹನದಲ್ಲಿದ್ದ ಐವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತಪಟ್ಟವರು ಕಾರ್ಗಿಲ್ ಮೂಲದವರಾಗಿದ್ದು, ಅವರನ್ನು ಮೊಹಮ್ಮದ್ ಹುಸೇನ್, ಶಬೀರ್ ಹುಸೇನ್, ಮೊಹಮ್ಮದ್ ಅಕ್ಬರ್, ಮೊಹಮ್ಮದ್ ಅಮೀನ್ ಮತ್ತು ಅಬ್ದುಲ್ ಹಾದಿ ಎಂದು ಗುರುತಿಸಲಾಗಿದೆ.

ಮೂರು ದಿನಗಳಲ್ಲಿ ಶ್ರೀನಗರ-ಲೇಹ್ ಹೆದ್ದಾರಿಯಲ್ಲಿ ಜೊಜಿಲಾ ಪಾಸ್‌ನಲ್ಲಿ ಸಂಭವಿಸಿದ ಎರಡನೇ ದೊಡ್ಡ ಅಪಘಾತ ಇದಾಗಿದೆ. ಮಂಗಳವಾರ ನಡೆದ ಇದೇ ರೀತಿಯ ಅಪಘಾತದಲ್ಲಿ ಕೇರಳದ ನಾಲ್ವರು ಪ್ರವಾಸಿಗರು ಸೇರಿದಂತೆ ಐವರು ಸಾವನ್ನಪ್ಪಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...