ಕಾರವಾರ: ದಾಂಡೇಲಿಯಲ್ಲಿ ಮೊಸಳೆ ಕಾಟ ಹೆಚ್ಚಾಗಿದ್ದು ಕಾಳಿನದಿ ಭಾಗದ ಜನರು ಭಯದಲ್ಲೇ ಓಡಾಡುವಂತೆ ಮಾಡಿದೆ. ಇಲ್ಲಿಯವರೆಗೆ ಸುಮಾರು 5 ಜನರನ್ನು ಬಲಿ ತೆಗೆದುಕೊಂಡಿವೆ ಮೊಸಳೆಗಳು. ಇಷ್ಟಾದರೂ ಆಡಳಿತ ಮಂಡಳಿ ಯಾವುದೇ ಕ್ರಮ ವಹಿಸುತ್ತಿಲ್ಲವಂತೆ. ಆಡಳಿತ ಮಂಡಳಿಯ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹೌದು, ದಾಂಡೇಲಿ ಪ್ರಸಿದ್ದ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ನಿತ್ಯ ಸಾವಿರಾರು ಜನ ದಾಂಡೇಲಿಗೆ ಬರ್ತಾ ಇರ್ತಾರೆ. ದೇಶ ವಿದೇಶದಿಂದಲೂ ಅನೇಕರು ಭೇಟಿ ನೀಡಿ ಇಲ್ಲಿನ ಸ್ಥಳ ವೀಕ್ಷಣೆ, ಕಾಡು, ಕಾಳಿನದಿಯ ಸೌದರ್ಯ ಸವಿತಾರೆ. ಆದರೆ ಇದೀಗ ಪ್ರವಾಸಿಗರು ಕಾಳಿನದಿಗೆ ಇಳಿಯೋದಿಕ್ಕೆ ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಒಂದು ವರ್ಷದಿಂದ ಮೊಸಳೆಗೆ ಐದು ಜನ ಬಲಿಯಾಗಿದ್ದಾರೆ.
ಇಷ್ಟಾದರೂ ಇಲ್ಲಿನ ಆಡಳಿತ ಮಂಡಳಿಯಾಗಲೀ ಅಥವಾ ಅರಣ್ಯ ಇಲಾಖೆ ಅಧಿಕಾರಿಗಳಾಗಳೀ ಏನೂ ತಲೆಕೆಡಿಸಿಕೊಂಡಿಲ್ಲ. ಎಲ್ಲೆಲ್ಲಿ ಮೊಸಳೆ ಇವೆ ಅನ್ನೋದು ಗೊತ್ತಾಗಿದೆಯೋ ಅಂಥ ಜಾಗಗಳಿಗೆ ನಿರ್ಬಂಧ ಮಾಡುವ ಕೆಲಸವನ್ನೂ ಮಾಡದೆ ನಿರ್ಲಕ್ಷ್ಯ ಮಾಡಿದ್ದಾರೆ. ಅಧಿಕಾರಿಗಳ ಈ ನಿರ್ಲಕ್ಷ್ಯಕ್ಕೆ ಇನ್ನಷ್ಟು ಜನ ಬಲಿಯಾಗಬೇಕು ಅಂತ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಸ್ಥಳೀಯರು.