ಟ್ವಿಟರ್ ನಲ್ಲಿ ಸದಾ ಆಕ್ಟಿವ್ ಆಗಿರುವ ಉದ್ಯಮಿ ಆನಂದ್ ಮಹೀಂದ್ರಾ ಅವರು ಇತ್ತೀಚೆಗೆ ಒಂದೇ ಫ್ರೇಮಿನಲ್ಲಿ 5 ತಲೆಮಾರಿನವರೂ ಇರುವ ವಿಡಿಯೊ ಶೇರ್ ಮಾಡಿದ್ದಾರೆ. ಇದು ಸಾಕಷ್ಟು ವೈರಲ್ ಆಗಿದೆ.
ವೇದಿಕೆ ಮೇಲೆ ನಿಂತಿರುವ ಪುಟ್ಟ ಬಾಲಕ ತನ್ನ ತಂದೆಯನ್ನು ಕರೆಯುತ್ತಾನೆ, ಬಂದವನು ಆತನ ತಂದೆಯನ್ನು ಕರೆಯುತ್ತಾನೆ ಹೀಗೆ ಅವರವರ ತಂದೆಯನ್ನು ಕರೆದಾಗ ಐದು ಮಂದಿ ಒಟ್ಟಿಗೆ ಸಾಲಿಗೆ ನಗುನಗುತ್ತಾ ನಿಲ್ಲುವುದನ್ನು ವಿಡಿಯೋದಲ್ಲಿ ಕಾಣಬಹುದು.
ಝೂಮ್ ಮೀಟಿಂಗ್ ನಲ್ಲಿ ಫೋಟೋ ಇಟ್ಟು ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಮಹಿಳೆ
ಐದು ತಲೆಮಾರು ಒಟ್ಟಿಗೆ, ಈ ರೀತಿ ಪ್ರಪಂಚದಾದ್ಯಂತ ಐದು ತಲೆ ಮಾರು ಇರುವ ಎಷ್ಟು ಕುಟುಂಬ ಇರಬಹುದೆಂಬ ಅಚ್ಚರಿ ಇದೆ. ಭಾರತದಲ್ಲೂ ಇದೇ ರೀತಿ ಇರುವ ಐದು ತಲೆಮಾರಿನ ವಿಡಿಯೋ ನೋಡಲು ಅಪೇಕ್ಷೆ ಇದೆ ಎಂದು ಮಹೀಂದ್ರಾ ಹೇಳಿಕೊಂಡಿದ್ದಾರೆ.
ಆನಂದ್ ಮಹೀಂದ್ರಾ ವಿಡಿಯೋ ಹಂಚಿಕೊಂಡ ನಂತರ ಸರಿಸುಮಾರು 5 ಲಕ್ಷಕ್ಕೂ ಹೆಚ್ಚು ವೀಕ್ಷಣೆಯಾಗಿದೆ. ನೆಟ್ಟಿಗರು ಈ ಕ್ಲಿಪ್ಪನ್ನು ಇಷ್ಟಪಟ್ಟಿದ್ದು, ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.