ಚಿಕ್ಕಮಗಳೂರು: ಕೋಟ್ಯಂತರ ರೂಪಾಯಿ ಮೌಲ್ಯದ ಅಡಿಕೆ ಹಾಗೂ ಲಾರಿ ಸಮೇತ ಪರಾರಿಯಾಗಿದ್ದ ಚಾಲಕ ಸೇರಿ ಐವರನ್ನು ಬೀರೂರು ಪೊಲೀಸರು ಬಂಧಿಸಿದ್ದಾರೆ.
1.05 ಕೋಟಿ ರೂಪಾಯಿ ಮೌಲ್ಯದ 335 ಚೀಲ ಅಡಿಕೆ ಕಳವು0 ಮಾಡಿದ್ದ ಬಗ್ಗೆ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಮ್ಜಾ, ಮುಹ್ಮದ್ ಗೌಸ್ ಖಾನ್, ಮೊಹಮ್ಮದ್ ಸುಭಾನ್, ಫಯಾಜ್, ಸಾಧಿಕ್ ಅವರನ್ನು ಬಂಧಿಸಲಾಗಿದೆ.
ಬಂಧಿತರಿಂದ ಒಂದು ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಅಡಕೆ, 12 ಚಕ್ರದ ಲಾರಿ, 2.30 ಲಕ್ಷ ರೂ. ಪಡೆಯಲಾಗಿದೆ. ಬೀರೂರಿನ ದುಲಾರಾಮ್ ಎಂಬುವರಿಗೆ ಸೇರಿದ ಅಡಕೆಯನ್ನು ಗುಜರಾತ್ ಗೆ ಕಳುಹಿಸಬೇಕಿತ್ತು. 335 ಚೀಲ ಅಡಿಕೆ ತುಂಬಿಕೊಂಡು ಮಾರ್ಗ ಮಧ್ಯೆ ಲಾರಿ ಚಾಲಕ ಪರಾರಿಯಾಗಿದ್ದ. 24,500 ಕೆಜಿ ಅಡಿಕೆಯನ್ನು ಹೊಳಲ್ಕೆರೆ ಅನ್ ಲೋಡ್ ಮಾಡಿ ಎಸ್ಕೇಪ್ ಆಗಿದ್ದ ಆರೋಪಿಗಳನ್ನು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.