
ಬೆಂಗಳೂರು: ವೈಯಾಲಿ ಕಾವಲ್ ಠಾಣೆ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿದ್ದು, ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಜಿಂಕೆ ಕೊಂಬು, ಆನೆ ದಂತ, ಎರಡು ತಲೆಯ ಹಾವು ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ರಂಗಸ್ವಾಮಿ, ಲೋಕೇಶ, ಚಂದ್ರಶೇಖರ, ಶೇಖರ, ರೇಮಂಡ್ ಬಂಧಿತ ಆರೋಪಿಗಳು. ವೈಯಾಲಿ ಕಾವಲ್ ಪೊಲೀಸ್ ಠಾಣೆ ವ್ಯಾಪ್ತಿಯ 18ನೇ ಕ್ರಾಸ್, ಗುಟ್ಟಹಳ್ಳಿ ಸರ್ಕಲ್ ಬಳಿ ಆನೆ ದಂತ, ಜಿಂಕೆ ಕೊಂಬು, ಎರಡು ತಲೆ ಹಾವು ಮಾರಾಟ ಮಾಡಲು ಯತ್ನಿಸಿದ ವೇಳೆ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಐವರನ್ನು ಬಂಧಿಸಿ ಆನೆ ದಂತ, 12 ಜಿಂಕೆ ಕೊಂಬು, 2 ಎರಡು ತಲೆಯ ಹಾವುಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.