ಇತ್ತೀಚೆಗೆ ಯುವಜನತೆ ಹಠಾತ್ತನೆ ಹೃದಯಸ್ತಂಭನದಿಂದ ಮೃತಪಡುತ್ತಿರುವ ಸಂಖ್ಯೆ ಹೆಚ್ಚುತ್ತಿರುವುದು ತೀವ್ರ ಕಳವಳಕಾರಿಯಾಗಿದೆ. ಇದೀಗ ಬ್ರೆಜಿಲ್ ಮೂಲದ ಜನಪ್ರಿಯ ಫಿಟ್ನೆಸ್ ಪ್ರಭಾವಿ ಹಾಗೂ ಇನ್ಸ್ಟಾಗ್ರಾಂ ಇನ್ಫ್ಲುಯೆನ್ಸರ್ ಲಾರಿಸ್ಸಾ ಬೋರ್ಗೆಸ್ ಅವರು ತಮ್ಮ 33ನೇ ವಯಸ್ಸಿನಲ್ಲಿ ಡಬಲ್ ಹೃದಯಸ್ತಂಭನದಿಂದ ನಿಧನರಾಗಿದ್ದಾರೆ.
ಕಳೆದ ಒಂದು ವಾರದಿಂದ ಕೋಮಾದಲ್ಲಿದ್ದ ಬೋರ್ಗೆಸ್ ಡಬಲ್ ಹೃದಯ ಸ್ತಂಭನಕ್ಕೆ ಬಲಿಯಾದ್ರು. ಈ ಬಗ್ಗೆ ಅವರ ಕುಟುಂಬವು ಇನ್ಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.
ನಮ್ಮ ಪ್ರೀತಿಯ ಲಾರಿಸ್ಸಾ ಬೋರ್ಗೆಸ್ ಅವರು ಮೃತಪಟ್ಟಿರುವುದಾಗಿ ನಾವು ತೀವ್ರ ದುಃಖದಿಂದ ವರದಿ ಮಾಡುತ್ತಿದ್ದೇವೆ. ಲಾರಿಸ್ಸಾ ಭಾನುವಾರ ಆಗಸ್ಟ್ 20 ರಂದು ಹೃದಯ ಸ್ತಂಭನಕ್ಕೆ ಒಳಗಾಗಿದ್ದರು. ಆಸ್ಪತ್ರೆಯಲ್ಲಿ ಅವರು ಒಂದು ವಾರದವರೆಗೆ ಕೋಮಾದಲ್ಲಿ ಧೈರ್ಯದಿಂದ ಹೋರಾಡಿದ್ರು. ಅವರು ಆಗಸ್ಟ್ 28ರಂದು ಮತ್ತೊಂದು ಹೃದಯ ಸ್ತಂಭನಕ್ಕೊಳಗಾದ್ರು. ದುರದೃಷ್ಟವಶಾತ್ ಬದುಕುಳಿಯಲಿಲ್ಲ ಎಂದು ಕುಟುಂಬ ಬಹಿರಂಗಪಡಿಸಿದೆ.
ಬೋರ್ಗೆಸ್ ಅವರ ಅಕಾಲಿಕ ಮರಣದ ಬಗ್ಗೆ ಕುಟುಂಬದವರು ತಮ್ಮ ಆಳವಾದ ದುಃಖವನ್ನು ವ್ಯಕ್ತಪಡಿಸಿದ್ದಾರೆ, ಇಷ್ಟು ಚಿಕ್ಕ ವಯಸ್ಸಿನ ಮತ್ತು ತುಂಬಾ ಸುಂದರ ಮಹಿಳೆಯನ್ನು ಕಳೆದುಕೊಂಡ ನೋವು ಅಗಾಧವಾಗಿದೆ. ನಮ್ಮ ಹೃದಯ ಮುರಿದುಹೋಗಿವೆ ಎಂದು ಕುಟುಂಬಸ್ಥರು ಅಪಾರ ದುಃಖ ವ್ಯಕ್ತಪಡಿಸಿದ್ದಾರೆ.
ಅವಳ ಆಕರ್ಷಕ ವ್ಯಕ್ತಿತ್ವದ ಜೊತೆಗೆ, ಬೋರ್ಗೆಸ್ ತನ್ನ ಸಮರ್ಪಣೆ ಮತ್ತು ಕಠಿಣ ಪರಿಶ್ರಮಕ್ಕಾಗಿ ಗುರುತಿಸಲ್ಪಟ್ಟಳು. ಅವಳು ತನ್ನ ಜೀವನಕ್ಕಾಗಿ ದಣಿವರಿಯಿಲ್ಲದೆ ಹೋರಾಡಿದಳು. ದೃಢನಿಶ್ಚಯದ, ಯೋಧ ಮಹಿಳೆ ಮಾಡುವ ಎಲ್ಲಾ ಅಡೆತಡೆಗಳನ್ನು ಎದುರಿಸಿದಳು ಎಂದು ಕುಟುಂಬ ಬೋರ್ಗೆಸ್ ಳ ವ್ಯಕ್ತಿತ್ವದ ಬಗ್ಗೆ ತಿಳಿಸಿದೆ.
ಇನ್ನು ಬೋರ್ಗೆಸ್ ಸಾವಿಗೂ ಮೊದಲು ಆಕೆ ಆಲ್ಕೋಹಾಲ್ ಮತ್ತು ಮಾದಕ ಪದಾರ್ಥಗಳನ್ನು ಸೇವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ 30,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಬೋರ್ಗೆಸ್, ತನ್ನ ವ್ಯಾಯಾಮದ ದಿನಚರಿಗಳು, ಬ್ರೆಜಿಲ್ನಲ್ಲಿನ ದೈನಂದಿನ ಜೀವನ ಮತ್ತು ತನ್ನ ಪ್ರಯಾಣದ ಕುರಿತು ಆಗಾಗ್ಗೆ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿದ್ದಳು.