ಈಗ ಗಳಿಕೆಗೆ ಅನೇಕ ಅವಕಾಶವಿದೆ. ಮನೆಯಲ್ಲೇ ಕುಳಿತು ಅನೇಕರು,ಹಣ ಗಳಿಸುತ್ತಿದ್ದಾರೆ. ಸಣ್ಣ ಸಣ್ಣ ಮೂಲವೂ ಈಗ ಹಣ ಗಳಿಕೆಗೆ ದಾರಿ ಮಾಡಿಕೊಡ್ತಿದೆ. ಕೇವಲ ಉದ್ಯೋಗದಿಂದ ಮಾತ್ರವಲ್ಲ, ಫಿಟ್ನೆಸ್ ಅಪ್ಲಿಕೇಷನ್ ಗಳಿಂದ ಕೂಡ ಹಣ ಗಳಿಸಬಹುದಾಗಿದೆ.
ಸಾಮಾಜಿಕ ಜಾಲತಾಣದಂತೆ ಅನೇಕ ಫಿಟ್ನೆಸ್ ಅಪ್ಲಿಕೇಷನ್ ಗಳಿವೆ. ಅವು ಫಿಟ್ನೆಸ್ ಬಗ್ಗೆ ಮಾಹಿತಿ ನೀಡುವ ಜೊತೆಗೆ ಜನರಿಗೆ ಹಣ ಗಳಿಸುವ ಅವಕಾಶ ನೀಡುತ್ತವೆ.
ಸ್ಟೆಪ್ ಸೆಟ್ ಗೊ: ಇದು ಮೊಬೈಲ್ ಫಿಟ್‌ನೆಸ್ ರಿವಾರ್ಡ್ ಪ್ಲಾಟ್‌ಫಾರ್ಮ್. ಬಳಕೆದಾರರು ತಮ್ಮ ಸ್ಟೆಪ್ಸ್ ಗಳನ್ನು ಕ್ರೆಡಿಟ್‌ಗಳಾಗಿ ಪರಿವರ್ತಿಸುವ ಮೂಲಕ ಅನೇಕ ರಿಯಾಯಿತಿ, ಉಡುಗೊರೆ, ಹಣ ಗಳಿಸಬಹುದು.
ಪೇಡ್ ಟು ಗೋ : ಇದು ವಾಕ್ ಮತ್ತು ರನ್ ಟ್ರ್ಯಾಕರ್ ಅಪ್ಲಿಕೇಶನ್ ಆಗಿದೆ. ಇದು ಬಳಕೆದಾರರಿಗೆ ನಡೆಯುವ ಅಥವಾ ಓಡುವ ಚಾಲೆಂಜ್ ನೀಡುತ್ತದೆ. ಅದನ್ನು ಪೂರ್ಣಗೊಳಿಸದವರಿಗೆ ನಗದು ಅಥವಾ ಬಿಟ್‌ಕಾಯಿನ್‌ಗಳನ್ನು ನೀಡುತ್ತದೆ.
ಗ್ರಾಫಿಟರ್ : ಇದು ಭಾರತೀಯ ಫಿಟ್ನೆಸ್ ಅಪ್ಲಿಕೇಷನ್. ಪ್ರತಿ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಮೂಲಕ ಹಣ ಗಳಿಸಬಹುದು. ಜುಂಬಾ, ಸೈಕ್ಲಿಂಗ್ ಮತ್ತು ವಾಕಿಂಗ್‌ನಂತಹ ಯಾವುದೇ ಚಟುವಟಿಕೆಯನ್ನು ಆಯ್ಕೆ ಮಾಡುವ ಮೂಲಕ ಹಣ ಗಳಿಸಬಹುದು.
ಯೋಡೋ : ಇದು ಉಚಿತ ಹೆಲ್ತ್ ಅಪ್ಲಿಕೇಶನ್ ಆಗಿದೆ. ಇದು ನೀಡುವ ಫಿಟ್ನೆಸ್ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಮೂಲಕ ನೀವು ಹಣ, ಉಡುಗೊರೆ ಪಡೆಯಬಹುದಾಗಿದೆ.