ಉಡುಪಿ: ಮೀನಿನ ತ್ಯಾಜ್ಯದಿಂದ ಬಯೋ ಡೀಸೆಲ್ ಉತ್ಪಾದಿಸಲಾಗುವುದು. ಜನವರಿ ವೇಳೆಗೆ ಮೂಲ್ಕಿಯಲ್ಲಿ ಯೋಜನೆ ಜಾರಿಗೆ ಬರಲಿದೆ.
ಮೀನುಗಾರಿಕೆ ಸಚಿವ ಎಸ್. ಅಂಗಾರ ಈ ಕುರಿತು ಮಾಹಿತಿ ನೀಡಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀನುಗಾರಿಕೆ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ಬಯೋ ಡೀಸೆಲ್ ಉತ್ಪಾದನೆ ಯೋಜನೆ ಜಾರಿಗೆ ಬರಲಿದೆ. ಮೀನಿಗೆ ಸ್ಥಿರವಾದ ಬೆಲೆ ಸಿಗಲಿದೆ ಎಂದರು.
ಗೋವಿನ ತ್ಯಾಜ್ಯದಂತೆ ಮೀನಿನ ಎಲ್ಲಾ ಅಂಶಗಳ ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ವ್ಯವಸ್ಥೆ ರೂಪಿಸಲಾಗುತ್ತಿದೆ. ಒಳನಾಡು ಮೀನುಗಾರಿಕೆಗೆ ಉತ್ತೇಜನ ನೀಡಲಾಗುವುದು. ಈ ಮೂಲಕ ಮೀನಿನಿಂದ ನಾನಾ ಉತ್ಪನ್ನಗಳನ್ನು ತಯಾರಿಸುವುದು, ಮೀನು ಉತ್ಪಾದನೆ, ಕೃಷಿಗೆ ಪ್ರೋತ್ಸಾಹ, ಮಾರುಕಟ್ಟೆ ಸೃಷ್ಟಿ ಮತ್ತು ರಫ್ತಿಗೆ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.
ನಾಡ ದೋಣಿಗಳಿಗೆ ಸೀಮೆಎಣ್ಣೆ ಬದಲು ಪೆಟ್ರೋಲ್ ಬಳಸಿ ಮೀನುಗಾರಿಕೆ ನಡೆಸುವ ಸಾಧ್ಯತೆಗಳ ಬಗ್ಗೆ ಚಿಂತನೆ ನಡೆದಿದೆ ಎಂದು ಹೇಳಿದ್ದಾರೆ.