alex Certify ಬಲೆಗೆ ಬಿದ್ದ ಅಪರೂಪದ ಡಾಲ್ಫಿನ್; ವಾಪಸ್​ ಬಿಟ್ಟ ಮೀನುಗಾರರಿಗೆ ಮೆಚ್ಚುಗೆಯ ಮಹಾಪೂರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಲೆಗೆ ಬಿದ್ದ ಅಪರೂಪದ ಡಾಲ್ಫಿನ್; ವಾಪಸ್​ ಬಿಟ್ಟ ಮೀನುಗಾರರಿಗೆ ಮೆಚ್ಚುಗೆಯ ಮಹಾಪೂರ

ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಬಲೆಯಲ್ಲಿ ಸಿಲುಕಿದ್ದ ಎರಡು ಅಪರೂಪದ ಡಾಲ್ಫಿನ್​ಗಳನ್ನು ಜೀವಂತವಾಗಿ ರಕ್ಷಿಸಿ ಸುರಕ್ಷಿತವಾಗಿ ಸಮುದ್ರಕ್ಕೆ ಮೀನುಗಾರರು ಬಿಟ್ಟಿದ್ದು, ಎಲ್ಲೆಡೆ ಶ್ಲಾಘನೆಗಳ ಸುರಿಮಳೆಯಾಗಿದೆ.

ಇದರ ವಿಡಿಯೋ ವೈರಲ್​ ಆಗಿದ್ದು, ಮೀನುಗಾರರ ಕ್ರಮಕ್ಕೆ ಅರಣ್ಯ ಇಲಾಖೆ ಕೂಡ ಮೆಚ್ಚುಗೆ ವ್ಯಕ್ತಪಡಿಸಿದೆ. ರಾಮನಾಥಪುರಂ ಜಿಲ್ಲೆಯ ಮಂಡಪಂ, ಪಂಬನ್, ಉಚ್ಚಿಪುಳ್ಳಿ, ಸೆರಂಗೊಟ್ಟೆ, ಧನುಷ್ಕೋಡಿ ಮತ್ತಿತರ ಪ್ರದೇಶಗಳಲ್ಲಿ ಮೀನುಗಾರರು ಮೀನುಗಾರಿಕೆಯಲ್ಲಿ ತೊಡಗಿದ್ದರು.

ಈ ವೇಳೆ ರಾಮನಾಥಪುರದ ಸಮುದ್ರದಲ್ಲಿ ಮೀನುಗಾರರು ಬಲೆ ಬೀಸಿದಾಗ ಮನ್ನಾರ್ ಕೊಲ್ಲಿಯಲ್ಲಿ ವಾಸಿಸುವ ಅಪರೂಪದ ಎರಡು ಡಾಲ್ಫಿನ್ ಬಲೆಗೆ ಸಿಕ್ಕಿಬಿದ್ದಿವೆ. ಇವು ಅಪರೂಪದ ಜಾತಿಗಳು ಎಂದು ತಿಳಿದ ತಕ್ಷಣ ಮೀನುಗಾರರು ಬಲೆಯಲ್ಲಿದ್ದ ಇತರೆ ಮೀನುಗಳನ್ನು ಬೇರ್ಪಡಿಸಿ ಜೀವಂತವಾಗಿ ಸಿಲುಕಿದ್ದ ಡಾಲ್ಫಿನ್​ಗಳನ್ನು ರಕ್ಷಿಸಿದ್ದಾರೆ.

ಅವುಗಳಣ್ನು ತಕ್ಷಣ ಸಮುದ್ರಕ್ಕೆ ಬಿಡಲಾಯಿತು. ಪ್ರದೇಶದ ಮೀನುಗಾರರು ಘಟನೆಯ ವಿಡಿಯೋ ತೆಗೆದಿದ್ದು, ಅದೀಗ ವೈರಲ್​ ಆಗುತ್ತಿದೆ. ವೀಡಿಯೊವನ್ನು ತೆಗೆದುಕೊಂಡರು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಜಾಗೃತಿ ವೀಡಿಯೊವನ್ನು ಪೋಸ್ಟ್ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...