
ಉಡುಪಿ: ಮೀನುಗಾರಿಕೆಗೆ ತೆರಳಿದ್ದ ಮೀನುಗಾರನೊಬ್ಬ ಬಲೆಯಲ್ಲಿ ಸಿಲುಕಿ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪೊಲಿಪು ಸಮುದ್ರ ಕಿನಾರೆಯಲ್ಲಿ ನಡೆದಿದೆ.
29 ವರ್ಷದ ಕಿಶೋರ್ ಮೃತ ದುರ್ದೈವಿ. ಎಂದಿನಂತೆ ಇಂದು ಕೂಡ ಕಿಶೋರ್ ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ಮೀನಿಗೆ ಬೀಸಿದ್ದ ಬಲೆಯಲ್ಲಿ ಸಿಲುಕಿ ಕಿಶೋರ್ ಸಾವನ್ನಪ್ಪಿದ್ದಾರೆ.
ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.