ಶಿವಮೊಗ್ಗ : ಮೀನುಗಾರಿಕೆ ಇಲಾಖೆ ವತಿಯಿಂದ 2023-24 ನೇ ಸಾಲಿನ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ವಿವಿಧ ಘಟಕಗಳಿಗೆ ಸಹಾಯಧನ ಸೌಲಭ್ಯ ನೀಡಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
10.00 ಹೆಕ್ಟೇರ್‍ನಲ್ಲಿ ಮೀನು ಕೃಷಿಕೊಳಗಳ ನಿರ್ಮಾಣ, ಇದರಲ್ಲಿ ಸಾಮಾನ್ಯ 5 ಹೆಕ್ಟೇರ್, ಮಹಿಳೆ 3 ಹೆಕ್ಟೇರ್, ಪರಿಶಿಷ್ಟ ಜಾತಿ 1.00 ಹೆಕ್ಟೇರ್ ಮತ್ತು ಪರಿಶಿಷ್ಟ ಪಂಗಡ 1 ಹೆಕ್ಟೇರ್. ಮೀನು ಕೃಷಿಕೊಳಗಳ ನಿರ್ಮಾಣ ಮಾಡಿಕೊಂಡು ಮೀನು ಕೃಷಿ ಕೈಗೊಂಡವರಿಗೆ ಹೂಡಿಕೆ ವೆಚ್ಚದ ಮೇಲೆ ಸಹಾಯ-10.00 ಹೆಕ್ಟೇರ್. ಇದರಲ್ಲಿ ಸಾಮಾನ್ಯ 5 ಹೆಕ್ಟೇರ್, ಮಹಿಳೆ 3 ಹೆಕ್ಟೇರ್, ಪರಿಶಿಷ್ಟ ಜಾತಿ 1.00 ಹೆಕ್ಟೇರ್ ಮತ್ತು ಪರಿಶಿಷ್ಟ ಪಂಗಡ 1 ಹೆಕ್ಟೇರ್.
ಮೀನುಕೃಷಿಗಾಗಿ ಬಯೋಪ್ಲಾಕ್ ಘಟಕ ನಿರ್ಮಾಣಕ್ಕೆ ಸಹಾಯ. ಹೂಡಿಕೆ ವೆಚ್ಚ ಸೇರಿದಂತೆ ಘಟಕ ವೆಚ್ಚ ರೂ.4 ಲಕ್ಷದಲ್ಲಿ ಪರಿಶಿಷ್ಟ ಜಾತಿಗೆ 2 ಘಟಕಗಳು. ಮೀನು ಮಾರಾಟಕ್ಕಾಗಿ ರೆಫ್ರಿಜರೇಟೆಡ್ ವಾಹನ ಖರೀದಿಗೆ ಸಹಾಯ ಪರಿಶಿಷ್ಟ ಜಾತಿಗೆ 01 ಘಟಕ, ಯಾಂತ್ರೀಕೃತ ದೋಣಿ ಖರೀದಿಗೆ ಸಹಾಯ(ಸಾಂಪ್ರದಾಯಿಕ ಮೀನುಗಾರರಿಗೆ –ಎಫ್‍ಆರ್‍ಪಿ ಬದಲಿ ದೋಣಿ ನಿರ್ಮಾಣಕ್ಕಾಗಿ ಸಾಮಾನ್ಯ 01 ಮತ್ತು ಮಹಿಳೆ 01 ಒಟ್ಟು 02 ಘಟಕಗಳಿಗೆ ಸಹಾಯಧನ ಸೌಲಭ್ಯ ನೀಡಲಾಗುವುದು.
ಸಹಾಯಧನ ಘಟಕಗಳ ಉಪಯೋಜನೆಗಳನ್ನು ಪಡೆಯಲು ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಶೇ.40 ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮಹಿಳಾ ಫಲಾನುಭವಿಗಳಿಗೆ ಶೇ.60 ರಷ್ಟು ಸಹಾಯಧನ ನೀಡಲಾಗುತ್ತದೆ. ಆಸಕ್ತರು ಸೆಪ್ಟೆಂಬರ್ 10 ರೊಳಗಾಗಿ ಆಯಾ ತಾಲ್ಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಯಿಂದ ಅರ್ಜಿಗಳನ್ನು ಪಡೆದು ಸಂಬಂಧಪಟ್ಟ ತಾಲ್ಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕೆಂದು ಮೀನುಗಾರಿಕೆ ಉಪನಿರ್ದೇಶಕ ಶಿವಕುಮಾರ್ ತಿಳಿಸಿದ್ದಾರೆ.