
ಸಾಗರದಲ್ಲಿ ಅಡಗಿರುವ ಜೀವರಾಶಿಗಳಿಗೆ ಲೆಕ್ಕವೇ ಇಲ್ಲ. ಸಂಶೋಧಕರು ಸಂಶೋಧನೆ ಮಾಡಿದಷ್ಟೂ ಹೊಸ ಹೊಸ ಜೀವಿಗಳು ಕಾಣಿಸಿಕೊಳ್ಳುತ್ತವೆ. ಇದೀಗ ಸಂಶೋಧಕರ ಗುಂಪೊಂದು ಸಾಗರದ ಆಳದಲ್ಲಿ ಅಸಾಮಾನ್ಯ ಎನಿಸಿರುವ ಅಪರೂಪದ ಸಮುದ್ರ ಜೀವಿಗಳನ್ನು ಕಂಡುಹಿಡಿದಿದೆ.
ಮೀನು ಜೀವಶಾಸ್ತ್ರಜ್ಞ ಯಿ-ಕೈ ಟೀ ಅವರು ತಮ್ಮ ತನಿಖೆಯ ಸಮಯದಲ್ಲಿ ಹಾರುವ ಮೀನನ್ನು ಕಂಡುಹಿಡಿದಿದ್ದು ಇವುಗಳ ಚಿತ್ರಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಚಿತ್ರಗಳಲ್ಲಿ, ಮೀನುಗಳು ತಮ್ಮ ರೆಕ್ಕೆಯಂತಹ ರೆಕ್ಕೆಗಳೊಂದಿಗೆ ಹಾರುತ್ತಿರುವುದನ್ನು ಕಾಣಬಹುದು. ಈ ಹಾರುವ ಜೀವಿಗಳನ್ನು ನೋಡುವುದೇ ತುಂಬಾ ಅದ್ಭುತ ಎಂದು ಅವರು ಬರೆದುಕೊಂಡಿದ್ದಾರೆ.
“ದಿನವಿಡೀ ಹಾರುವ ಮೀನುಗಳ ಫೋಟೋ ತೆಗೆಯುತ್ತಿದ್ದೇನೆ. ನಾವು ಈಗ 6 ಜಾತಿಗಳ ಹಾರುವ ಮೀನನ್ನು ನೋಡಿದ್ದೇವೆ. ಆದರೆ ಈಗ ಸಿಕ್ಕಿರುವ ಹಾರುವ ಮೀನು ಅವುಗಳಿಗಿಂತಲೂ ಭಿನ್ನವಾಗಿದ್ದು, ಹಲವು ಸ್ವಾರಸ್ಯಕರ ಸಂಗತಿಗಳನ್ನು ಹೊಂದಿವೆ“ ಎಂದು ಅವರು ಬರೆದಿದ್ದಾರೆ.
ಮೀನುಗಳಿಗೆ ರೆಕ್ಕೆಗಳಿರುತ್ತವೆ ನಿಜ. ಆದರೆ ಈ ಸಿಕ್ಕಿರುವ ಮೀನಿನ ರೆಕ್ಕೆಗಳ ಮೂಲಕ ಅವು ಹಾರಾಟ ಮಾಡುತ್ತವೆ. ಮಾತ್ರವಲ್ಲದೇ ಅವು ಈ ರೆಕ್ಕೆಗಳನ್ನು ಕೋಲಿನಂತೆ ಬಳಸಿ ನಿಲ್ಲುತ್ತವೆ ಎಂಬ ಕುತೂಹಲದ ಮಾಹಿತಿಯನ್ನೂ ಅವರು ಶೇರ್ ಮಾಡಿಕೊಂಡಿದ್ದಾರೆ.