ಚಿಕ್ಕಬಳ್ಳಾಪುರ: ಮೀನು ಹಿಡಿಯಲು ಹೋಗಿದ್ದ ಇಬ್ಬರು ನೀರು ಪಾಲಾಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಪಾಪಗ್ನಿ ನದಿಯಲ್ಲಿ ಘಟನೆ ನಡೆದಿದೆ.
ಮೀನು ಹಿಡಿಯಲು ಹೋದ ಪಲಿಚೇರ್ಲು ಗ್ರಾಮದ ಮಂಜುನಾಥ(32) ಹಾಗೂ ಮಂಜುನಾಥ್(42) ಮೃತಪಟ್ಟವರು ಎಂದು ಹೇಳಲಾಗಿದೆ. ಮೀನಿನ ಬಲೆಯಲ್ಲಿ ಕಾಲು ಸಿಲುಕಿಕೊಂಡು ಹೊರಬರಲು ಸಾಧ್ಯವಾಗದೇ ನೀರು ಪಾಲಾಗಿದ್ದಾರೆ. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.