ಮೀನು ಹಿಡಿಯಲು ನದಿಗೆ ಇಳಿದ ತಂದೆ, ಮಗ ಮೃತಪಟ್ಟ ಘಟನೆ ಕಟ್ಟಿಸಂಗಾವಿ ಸಮೀಪ ಭೀಮಾನದಿಯಲ್ಲಿ ನಿನ್ನೆ ಸಂಜೆ ನಡೆದಿದೆ.
ಕಲಬುರ್ಗಿ ಜಿಲ್ಲೆ ಜೇವರ್ಗಿ ತಾಲೂಕಿನ ಕಟ್ಟಿಸಂಗಾವಿ ಬಳಿ ಭೀಮಾನದಿಯಲ್ಲಿ ಘಟನೆ ನಡೆದಿದ್ದು, ಮೆಹಬೂಬ್ ಪಟೇಲ್(60), ಜಾವಿದ್ ಪಟೇಲ್(19) ಮೃತಪಟ್ಟವರು ಎಂದು ಹೇಳಲಾಗಿದೆ. ಜೇವರ್ಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.