ನವದೆಹಲಿ: ಕಾನ್ಪುರದಲ್ಲಿ 57 ವರ್ಷದ ವ್ಯಕ್ತಿಯೊಬ್ಬರಲ್ಲಿ ಝೀಕಾ ವೈರಸ್ ಪತ್ತೆಯಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆರೋಗ್ಯಾಧಿಕಾರಿಗಳ ತಂಡ ಗ್ರಾಮಕ್ಕೆ ತೆರಳಿ ಪರಿಶೀಲನೆ ನಡೆಸಿದೆ.
57 ವರ್ಷದ ವ್ಯಕ್ತಿಯಲ್ಲಿ ಝೀಕಾ ಸೋಂಕು ದೃಢಪಟ್ಟಿದ್ದು, ಅತಿಯಾದ ಜ್ವರ, ಸ್ನಾಯು ನೋವು, ಸುಸ್ತು ಮೊದಲಾದ ರೋಗ ಲಕ್ಷಣಗಳಿಂದ ವ್ಯಕ್ತಿ ಬಳಲುತ್ತಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಮುಂಜಾಗೃತಾ ಕ್ರಮವಾಗಿ ಆತನ ಕುಟುಂಬದ 22 ಜನರ ಸ್ಯಾಂಪಲ್ ನ್ನು ಕೂಡ ಸಂಗ್ರಹಿಸಲಾಗಿದೆ ಎಂದು ತಿಳಿದುಬಂದಿದೆ.
ದೀಪಾವಳಿಗೆ ಬಂಪರ್ ಗಿಫ್ಟ್ ..! ಕಡಿಮೆ ಬಡ್ಡಿಗೆ ಈ ಬ್ಯಾಂಕ್ ನೀಡ್ತಿದೆ ʼಗೃಹ ಸಾಲʼ
ಕೊರೊನಾ ವೈರಸ್ ನಂತೆಯೇ ಝೀಕಾ ವೈರಸ್ ಕೂಡ ರೂಪಾಂತರ ಗುಣಗಳನ್ನು ಹೊಂದಿರುವ ಸಾಧ್ಯತೆ ಇರುವುದರಿಂದ ರೋಗ ಲಕ್ಷಣ ಕಂಡುಬರುತ್ತಿದ್ದಂತೆಯೇ ಸೋಂಕಿತರನ್ನು ಪ್ರತ್ಯೇಕವಾಗಿ ಪರೀಕ್ಷೆಗೊಳಪಡಿಸಿ, ಸೂಕ್ತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ದೆಹಲಿಯ ಮೌಲಾನಾ ಆಜಾದ್ ಮೆಡಿಕಲ್ ಕಾಲೇಜು ನಿರ್ದೇಶಕ ಡಾ. ನರೇಶ್ ಗುಪ್ತಾ ತಿಳಿಸಿದ್ದಾರೆ.