ಟಿವಿಯಲ್ಲಿ ಮಹಿಳೆ ಅಥವಾ ಪುರುಷರು ನಿರೂಪಕರಾಗಿ ನಿರೂಪಣೆ ಮಾಡಿದ್ದನ್ನು ನಾವು ನೋಡಿರ್ತೇವೆ. ಆದ್ರೆ ನೆರೆಯ ಬಾಂಗ್ಲಾ ದೇಶದಲ್ಲಿ ಮೊದಲ ಬಾರಿ ಮಂಗಳಮುಖಿ ನಿರೂಪಕಿಯಾಗಿದ್ದಾರೆ. ಬಾಂಗ್ಲಾದೇಶದ ಖಾಸಗಿ ಸುದ್ದಿವಾಹಿನಿಯಲ್ಲಿ ಮಂಗಳಮುಖಿಗೆ ನಿರೂಪಕಿ ಕೆಲಸ ಸಿಕ್ಕಿದೆ.
ಮೊದಲ ಬಾರಿ ನ್ಯೂಸ್ ಓದುತ್ತಿದ್ದರು, ಉಳಿದ ಸುದ್ದಿ ವಾಚಕರಂತೆ ತಶ್ನುವಾ ಅನನ್ ಬುಲೆಟಿನ್ ಮುಗಿಸಿದ್ರು. ತಶ್ನುವಾ ಅನನ್, ಸುದ್ದಿ ಓದುತ್ತಿದ್ದರೆ ಸಹೋದ್ಯೋಗಿಗಳು ಪ್ರೋತ್ಸಾಹ ನೀಡ್ತಿದ್ದರು. ಮೊದಲ ಬುಲೆಟಿನ್ ಮುಗಿಸಿದ ತಶ್ನುವಾ ಅನನ್ ಕಣ್ಣಲ್ಲಿ ನೀರು ತುಂಬಿತ್ತು.
ಬಾಂಗ್ಲಾದೇಶದಲ್ಲಿ ಅಂದಾಜು 1.5 ಮಿಲಿಯನ್ ಮಂಗಳಮುಖಿಯರು ವಾಸವಾಗಿದ್ದಾರೆ.ಮಂಗಳಮುಖಿಯರಿಗೆ ಸರಿಯಾದ ಕೆಲಸವಿಲ್ಲ. ದೌರ್ಜನ್ಯಕ್ಕೆ ಒಳಗಾಗುವ ಮಂಗಳಮುಖಿಯರು ಭಿಕ್ಷೆ ಬೇಡಿ, ಸೆಕ್ಸ್ ವರ್ಕರ್ಸ್ ಆಗಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಕಿಶೋರಾವಸ್ಥೆಗೆ ಬರ್ತಿದ್ದಂತೆ ತಶ್ನುವಾಗೆ ತಾನು ಮಂಗಳಮುಖಿ ಎಂಬುದು ಗೊತ್ತಾಗಿತ್ತಂತೆ. ಏಳು ವರ್ಷಗಳವರೆಗೆ ಲೈಂಗಿಕ ದೌರ್ಜನ್ಯ ಹಾಗೂ ಶೋಷಣೆಗೆ ಒಳಗಾಗಿದ್ದಳಂತೆ. ನಾಲ್ಕೈದು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ ತಶ್ನುವಾ ತಂದೆ ಆಕೆ ಜೊತೆ ಮಾತನಾಡುವುದಿಲ್ಲವಂತೆ. ಇನ್ನೂ 29 ವರ್ಷದ ತಶ್ನುವಾ, ಮನೆ ಬಿಟ್ಟ ನಂತ್ರ ಸಾಕಷ್ಟು ಕೆಲಸ ಮಾಡಿದ್ದಾಳೆ. ಕೆಲಸದ ಜೊತೆ ಓದು ಮುಂದುವರೆಸಿದ್ದ ತಶ್ನುವಾ, ಢಾಕಾದ ಜೇಮ್ಸ್ ಪಿ. ಗ್ರಾಂಟ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ನಲ್ಲಿ ಸಾರ್ವಜನಿಕ ಆರೋಗ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಮೊದಲ ಮಂಗಳಮುಖಿ.