ಈ ವರ್ಷದ ಮೊದಲ ಚಂದ್ರಗ್ರಹಣವು ಮೇ 15 ರ ಸಂಜೆಯಿಂದ ಮೇ 16 ರ ಬೆಳಗಿನ ಜಾವದವರೆಗೆ ಸಂಭವಿಸಲಿದೆ. ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬಂದ ಸಂದರ್ಭದಲ್ಲಿ ಈ ಚಂದ್ರಗ್ರಹಣ ಸಂಭವಿಸಲಿದ್ದು, ಅದರ ನೆರಳನ್ನು ಚಂದ್ರನನ್ನು ಆವರಿಸಿದಾಗ ಸಂಪೂರ್ಣ ಚಂದ್ರಗ್ರಹಣ ಉಂಟಾಗುತ್ತದೆ.
ನಾಸಾದ ಪ್ರಕಾರ, ಸಂಪೂರ್ಣ ಚಂದ್ರಗ್ರಹಣದ ವೇಳೆಯಲ್ಲಿ ಚಂದ್ರನು ಮೂಲತಃ ಭೂಮಿಯ ನೆರಳಿನ ಕಪ್ಪು ಭಾಗದೊಳಗೆ ಬೀಳುತ್ತಾನೆ. ಇದನ್ನು `ಉಂಬ್ರಾ’ ಎಂದು ಕರೆಯಲಾಗುತ್ತದೆ. ಚಂದ್ರನು `ಉಂಬ್ರಾ’ದಲ್ಲಿದ್ದ ಸಂದರ್ಭದಲ್ಲಿ ಅದರ ಬಣ್ಣವು ಕಡುಗೆಂಪು ಬಣ್ಣಕ್ಕೆ ಬದಲಾಗುತ್ತದೆ. ಆದ್ದರಿಂದ ಇದಕ್ಕೆ `ಬ್ಲಡ್ ಮೂನ್’ ಎಂದು ಹೆಸರಿಡಲಾಗಿದೆ.
BIG NEWS: ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಪುತ್ರಿಗೆ ಕೊಲೆ ಬೆದರಿಕೆ; ಕಾರು ತಡೆದು ಹಲ್ಲೆಗೆ ಯತ್ನ
ಈ ಸಂಪೂರ್ಣ ಚಂದ್ರಗ್ರಹಣವು ದಕ್ಷಿಣ ಅಮೆರಿಕಾ ಮತ್ತು ಉತ್ತರ ಅಮೆರಿಕಾದ ಪೂರ್ವ ಭಾಗಗಳಲ್ಲಿ ಗೋಚರಿಸುತ್ತದೆ. ಮೇ 15 ರಂದು ರಾತ್ರಿ 9.32 (ಯುರೋಪ್ ಸಮಯ) ಕ್ಕೆ ಕಾಣಿಸಿಕೊಳ್ಳಲಿದ್ದು, ಭೂಮಿಯ ಉಮ್ರಾ ರಾತ್ರಿ 11.29(ಯುರೋಪ್ ಸಮಯ) ಕ್ಕೆ ಸಂಪೂರ್ಣವಾಗಿ ಗೋಚರವಾಗಲಿದೆ. ಅದೇ ರೀತಿ ಮೇ 16 ರ ಬೆಳಗಿನ ಜಾವ 2.50 ಕ್ಕೆ ಗ್ರಹಣ ಪೂರ್ಣಗೊಳ್ಳಲಿದೆ.