2023-24 ನೇ ಸಾಲಿನ ಬಜೆಟ್ ಹಲವು ವಿಶೇಷಗಳಿಗೆ ಸಾಕ್ಷಿಯಾಗಿದೆ. ಅದರಲ್ಲೂ ಸ್ತ್ರೀಶಕ್ತಿಯ ಅನಾವರಣವಾಗಿದೆ. 1947ರ ನಂತರ ಮೊದಲ ಬಾರಿಗೆ ಮಹಿಳಾ ರಾಷ್ಟ್ರಪತಿಯೊಬ್ಬರು ಮತ್ತೊಬ್ಬ ಮಹಿಳಾ ಸಚಿವರು ( ಸಚಿವೆ) ಮಂಡಿಸಿದ ಬಜೆಟ್ ಅಧಿವೇಶನವನ್ನು ಆರಂಭಿಸಿದರು.
ಈ ಬಾರಿ ಬಜೆಟ್ ಅಧಿವೇಶನವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಾರಂಭಿಸಿದರೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಿದರು.
ಮಹಿಳೆಯರ ಆರ್ಥಿಕ ಸಬಲೀಕರಣವು ಉನ್ನತ ವಲಯದ ಮೇಲೆ ನಮ್ಮ ದೃಷ್ಟಿಯನ್ನು ಸಾಧಿಸುವಲ್ಲಿ ರೂಪಾಂತರಗೊಳ್ಳುವ ಒಂದು ಅವಕಾಶವಾಗಿದೆ ಎಂದು ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಹೇಳಿದರು.
2023 ರ ಬಜೆಟ್ ಅಧಿವೇಶನದ ಎರಡನೇ ದಿನವು ಬುಧವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಐದನೇ ಕೇಂದ್ರ ಬಜೆಟ್ ಅನ್ನು ಮಂಡಿಸುವುದರೊಂದಿಗೆ ಪ್ರಾರಂಭವಾಯಿತು. ಇದನ್ನು ಅವರು “ಅಮೃತ ಕಾಲದ ಮೊದಲ ಬಜೆಟ್” ಎಂದು ವಿವರಿಸಿದರು.
ನಾವು ಸಮೃದ್ಧ ಮತ್ತು ಎಲ್ಲರನ್ನೂ ಒಳಗೊಳ್ಳುವ ಭಾರತವನ್ನು ಕಲ್ಪಿಸುತ್ತೇವೆ ಎಂದು ನಿರ್ಮಲಾ ಸೀತಾರಾಮನ್ ತಮ್ಮ ಆರಂಭಿಕ ಹೇಳಿಕೆಯಲ್ಲಿ ಹೇಳಿದರು.