
ನವದೆಹಲಿ: ಬಿಜೆಪಿ ಆಡಳಿತದ ಎಂಸಿಡಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಆಮ್ ಆದ್ಮಿ ಪಕ್ಷದ ಶಾಸಕ ಅತಿಶಿ, ದೆಹಲಿಯ ದೇವಸ್ಥಾನಗಳ ಮೇಲೆ ಬಲವಂತವಾಗಿ ತೆರಿಗೆ ವಿಧಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮೊಘಲ್ ದೊರೆ ಔರಂಗಜೇಬನ ಆಳ್ವಿಕೆಯ ನಂತರ ಇದೇ ಮೊದಲ ಬಾರಿಗೆ ದೇವಾಲಯಗಳಿಂದ ತೆರಿಗೆ ಕೇಳಲಾಗುತ್ತಿದೆ ಎಂದು ಅವರು ಹೇಳಿದರು.
ಈಸ್ಟ್ ಎಂಸಿಡಿ ತೆರಿಗೆ ಪಾವತಿಸಲು ಹಲವಾರು ದೇವಾಲಯಗಳಿಗೆ ನೋಟಿಸ್ ಕಳುಹಿಸಿದೆ. ತೆರಿಗೆ ಪಾವತಿಸದಿದ್ದರೆ ದೇವಸ್ಥಾನವನ್ನು ಸೀಲ್ ಮಾಡಲಾಗುವುದು ಎಂದು ಹೇಳಲಾಗಿದೆ. ಔರಂಗಜೇಬನ ಆಳ್ವಿಕೆಯ ನಂತರ ಯಾರಾದರೂ ದೇವಸ್ಥಾನಕ್ಕೆ ಇಂತಹ ಸೂಚನೆಯನ್ನು ಕಳುಹಿಸಲು ಧೈರ್ಯಮಾಡಿರುವುದು ಇದೇ ಮೊದಲು. 1679 ರಲ್ಲಿ ಔರಂಗಜೇಬನು ದೇವಾಲಯಗಳ ಮೇಲೆ ಜಿಜ್ಯಾವನ್ನು ವಿಧಿಸಿದನು. ಇಂದು, 2021 ರಲ್ಲಿ, ಪೂರ್ವ ಎಂಸಿಡಿ ದೇವಸ್ಥಾನಗಳ ಮೇಲೆ ಆಸ್ತಿ ತೆರಿಗೆಯನ್ನು ವಿಧಿಸಿದೆ. ಇದು ಭಾರತೀಯ ಜನತಾ ಪಕ್ಷದ ಅಸಲಿ ಮುಖ ಎಂದು ಟೀಕಿಸಿದ್ದಾರೆ.
ರಾಜ್ಯದಲ್ಲಿ ಎಷ್ಟು ಸಾಧ್ಯವೋ ಅಷ್ಟು ಸುಲಿಗೆ ಮಾಡುತ್ತಿದ್ದರು. ಆದರೆ, ಈಗ ಪುರೋಹಿತರ ದಕ್ಷಿಣೆಯನ್ನೂ ಪಡೆಯಲು ಮುಂದಾಗಿದ್ದಾರೆ. ದೇವಸ್ಥಾನಗಳಿಗೆ ಆಸ್ತಿ ತೆರಿಗೆ ಪಾವತಿಸಲು ಯಾವ ರೀತಿಯ ಸರ್ಕಾರವು ಕೇಳುತ್ತದೆ? ಅತಿಶಿ ಪ್ರಶ್ನಿಸಿದ್ದಾರೆ.
ಇಲ್ಲಿಯವರೆಗೆ ಅವರು ಸಾಮಾನ್ಯರ ಹಣವನ್ನು ದೋಚುತ್ತಿದ್ದರು. ಆದರೂ ಅವರ ಹಸಿವು ನೀಗಿಲ್ಲ ಎಂದು ತೋರುತ್ತದೆ. ಅವರು ಈಗ ದೆಹಲಿಯ ಇತಿಹಾಸದಲ್ಲಿ ಮೊದಲ ಬಾರಿಗೆ ದೇವಾಲಯಗಳಿಗೂ ತೆರಿಗೆ ಪಾವತಿಸಲು ಒತ್ತಾಯಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ಭಗವಾನ್ ಶ್ರೀರಾಮನ ಹೆಸರಿನಲ್ಲಿ ಮತ ಕೇಳುವ ತಂತ್ರವು ಕೇವಲ ಗಿಮಿಕ್ ಆಗಿದೆ. ಎಲ್ಲಾ ದೇವಾಲಯಗಳು, ಗುರುದ್ವಾರಗಳು ಮತ್ತು ಮಸೀದಿಗಳಿಗೆ ತೆರಿಗೆ ಪಾವತಿಸಲು ನೋಟಿಸ್ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.