ಅಧಿಕಾರದಲ್ಲಿ ಮುಂದುವರೆಯಬೇಕೆಂದುಕೊಂಡಿದ್ದ ಘಟಾನುಘಟಿ ನಾಯಕರಿಗೆ ಬಿಜೆಪಿ ಹೈಕಮಾಂಡ್ ಬಿಸಿ ಮುಟ್ಟಿಸಿದೆ. ಗುಜರಾತ್ ನಲ್ಲಿ ಮೊದಲ ಬಾರಿಗೆ ಗೆದ್ದ ಶಾಸಕ ಭೂಪೇಂದ್ರ ಪಟೇಲ್ ಅವರನ್ನು ಮುಖ್ಯಮಂತ್ರಿಯಾಗಿ ಮಾಡಿದ್ದ ಬಿಜೆಪಿ ವರಿಷ್ಠರು ಈಗ ಹಳಬರೆಲ್ಲರಿಗೂ ಕೊಕ್ ನೀಡಿದ್ದಾರೆ. ಸಂಪುಟಕ್ಕೆ ಸಂಪೂರ್ಣವಾಗಿ ಹೊಸಬರನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ. ಮುಖ್ಯಮಂತ್ರಿ ಸೇರಿದಂತೆ ಇಡೀ ಸಂಪುಟದಲ್ಲಿರುವ ಎಲ್ಲಾ ಸಚಿವರು ಹೊಸಬರೆ ಆಗಿದ್ದಾರೆ.
ನಿಕಟಪೂರ್ವ ಸಿಎಂ ವಿಜಯ ರೂಪಾನಿ ಸಂಪುಟದಲ್ಲಿದ್ದ ಎಲ್ಲಾ ಸಚಿವರನ್ನು ಕೈಬಿಡಲಾಗಿದ್ದು, ಬಿಜೆಪಿ ಹೈಕಮಾಂಡ್ ಆಚ್ಚರಿ ನಿರ್ಧಾರ ಸಚಿವ ಸ್ಥಾನದಲ್ಲಿ ಮುಂದುವರೆಯುವ ಲೆಕ್ಕಾಚಾರದಲ್ಲಿದ್ದ ಘಟಾನುಘಟಿ ನಾಯಕರಿಗೆ ಬಿಗ್ ಶಾಕ್ ನೀಡಿದೆ.
ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆಯನ್ನು ಶಮನಗೊಳಿಸುವ ಉದ್ದೇಶದಿಂದ ಮುಖ್ಯಮಂತ್ರಿ ಸೇರಿದಂತೆ ಎಲ್ಲ ಸಚಿವ ಸ್ಥಾನಕ್ಕೆ ಹೊಸಬರನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ. ಜಾತಿ, ಪ್ರದೇಶ, ಸಮುದಾಯ, ಲಿಂಗ ಸಮತೋಲನಕ್ಕೆ ತೊಂದರೆಯಾಗದಂತೆ ಬಿಜೆಪಿ ಹೈಕಮಾಂಡ್ ಮಹತ್ವದ ನಿರ್ಧಾರ ಕೈಗೊಂಡಿದೆ. ಕಳೆದ 27 ವರ್ಷಗಳಿಂದ ಗುಜರಾತ್ ನಲ್ಲಿ ನಿರಂತರವಾಗಿ ಅಧಿಕಾರದಲ್ಲಿರುವ ಬಿಜೆಪಿ ಈ ಬಾರಿ ಮುಖ್ಯಮಂತ್ರಿ ಸೇರಿದಂತೆ ಸಂಪುಟಕ್ಕೆ ಹೊಸಬರನ್ನು ನೇಮಕ ಮಾಡಿರುವುದರ ಈ ಪ್ರಯೋಗ ರಾಜಕೀಯ ಲೆಕ್ಕಾಚಾರಗಳ ಚಿತ್ರಣವನ್ನೇ ಬದಲಿಸಿದೆ ಎಂದು ಹೇಳಲಾಗಿದೆ.