alex Certify BIG NEWS: 75 ವರ್ಷಗಳಲ್ಲಿ ಇದೇ ಮೊದಲ ಬಾರಿ 30 ನಿಮಿಷ ವಿಳಂಬವಾಗಿ ಶುರುವಾಗಲಿದೆ ಗಣರಾಜ್ಯೋತ್ಸವದ ಪರೇಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 75 ವರ್ಷಗಳಲ್ಲಿ ಇದೇ ಮೊದಲ ಬಾರಿ 30 ನಿಮಿಷ ವಿಳಂಬವಾಗಿ ಶುರುವಾಗಲಿದೆ ಗಣರಾಜ್ಯೋತ್ಸವದ ಪರೇಡ್

ಗಣರಾಜ್ಯೋತ್ಸವದ ಪರೇಡ್ ಯಾವಾಗಲೂ ಒಂದಲ್ಲ ಒಂದು ರೀತಿಯಲ್ಲಿ, ಅರ್ಥದಲ್ಲಿ ವಿಶೇಷವಾಗಿರುತ್ತದೆ. ಟ್ಯಾಬ್ಲೋ ಆಗಿರಲಿ ಅಥವಾ ಮಾರ್ಚ್ ಪಾಸ್ಟ್ ಆಗಿರಲಿ, ಸಂವಿಧಾನದ ಸಂಭ್ರಮದಲ್ಲಿ ಪ್ರತಿ ವರ್ಷವೂ ಹೊಸ ಆಕರ್ಷಣೆ ಇರುತ್ತದೆ. ಈ ವರ್ಷವೂ ಆಚರಣೆ ಭಿನ್ನವಾಗಿರುವುದಿಲ್ಲ, ಆದರೆ ಸಮಯ ಬದಲಾವಣೆಯಾಗಿದೆ.

ಹೌದು, ಪ್ರತಿ ವರ್ಷದಂತೆ ಈ ವರ್ಷ ಬೆಳಗ್ಗೆ 10 ಗಂಟೆಗೆ ಮೆರವಣಿಗೆ ಪ್ರಾರಂಭವಾಗುವುದಿಲ್ಲ. 30 ನಿಮಿಷ ವಿಳಂಬವಾಗುತ್ತದೆ. 75 ವರ್ಷಗಳಲ್ಲಿ ಮೊದಲ ಬಾರಿಗೆ ಈ ರೀತಿಯಾಗಿ ನಡೆಯುತ್ತಿದೆ. ಬಹುಶಃ ಕೋವಿಡ್ ನಿರ್ಬಂಧಗಳಿಂದಾಗಿ ಈ ಸಮಯ ಬದಲಾವಣೆಯಾಗಿದೆ ಎಂದು ಹೇಳಲಾಗುತ್ತಿದೆ.

ಪರೇಡ್‌ ಗೂ ಮುನ್ನ, ಭಾರತ ಮಾತೆಯನ್ನು ರಕ್ಷಿಸುತ್ತಾ ತಮ್ಮ ಪ್ರಾಣ ಅರ್ಪಿಸಿದ ಜಮ್ಮು ಮತ್ತು ಕಾಶ್ಮೀರ ಭದ್ರತಾ ಸಿಬ್ಬಂದಿಗೆ ಗೌರವ ಸಲ್ಲಿಸಲಾಗುವುದು. ಪರೇಡ್ ಸಾಮಾನ್ಯವಾಗಿ 10 ಗಂಟೆಗೆ ಪ್ರಾರಂಭವಾಗುತ್ತದೆ, ಆದರೆ ಈ ವರ್ಷ ಅದು 10.30 ಕ್ಕೆ ಪ್ರಾರಂಭವಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಳೆದ ವರ್ಷದಂತೆ 90 ನಿಮಿಷಗಳ ಕಾಲ ಪರೇಡ್ ಸಮಾರಂಭ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಎಂದಿನಂತೆ ಇಂಡಿಯಾ ಗೇಟ್ ಬಳಿಯ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ.

ಆನಂತರ, ತಂಡಗಳು ಮಾರ್ಚ್ ಪಾಸ್ಟ್ ನಡೆಸುತ್ತವೆ. ಮೆರವಣಿಗೆಯಲ್ಲಿ, ದೇಶದ ಸಾಂಸ್ಕೃತಿಕ ವೈವಿಧ್ಯತೆ, ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯನ್ನು ಪ್ರತಿನಿಧಿಸುವ ಟ್ಯಾಬ್ಲೋಗಳನ್ನು ಪ್ರದರ್ಶಿಸಲಾಗುತ್ತದೆ. ಕೋವಿಡ್ ನಿರ್ಬಂಧಗಳ ಕಾರಣದಿಂದಾಗಿ, ಗಣರಾಜ್ಯೋತ್ಸವದಂದು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡುವ ಕಲಾವಿದರಿಗೆ ಯಾರನ್ನೂ ಭೇಟಿಯಾಗಲು ಅನುಮತಿ ನೀಡಿಲ್ಲ. ಅವರು ಸ್ಯಾನಿಟೈಸ್ಡ್ ವಾಹನಗಳಲ್ಲಿ ಪ್ರಯಾಣಿಸಲಿದ್ದು, ಪ್ರತ್ಯೇಕವಾಗಿ ಇರಲಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...