ನವದೆಹಲಿ: ಜನವರಿ 26 ರ ಗಣರಾಜ್ಯೋತ್ಸವ ದಿನದಂದು ದೇಶದ ಇತಿಹಾಸದಲ್ಲಿ ಇದೇ ಮೊದಲ ಸಲ 75 ಯುದ್ಧವಿಮಾನಗಳು, ಹೆಲಿಕಾಪ್ಟರ್ ಗಳ ಏರ್ ಶೋ ನಡೆಯಲಿದೆ.
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದ ಹಿನ್ನಲೆಯಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ್ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಾಜಪಥದಲ್ಲಿ ಗಣರಾಜ್ಯೋತ್ಸವದ ಪರೇಡ್ ನಲ್ಲಿ 75 ಯುದ್ಧವಿಮಾನಗಳ ಏರ್ ಶೋ ನಡೆಯಲಿದೆ.
ವಾಯುಸೇನೆ, ನೌಕಾಪಡೆ, ವಾಯುಪಡೆಯ 75 ಯುದ್ಧವಿಮಾನಗಳಿಂದ ಅದ್ದೂರಿಯಾಗಿ ಏರ್ ಶೋ ನಡೆಸಲಾಗುವುದು ಎಂದು ವಾಯುಪಡೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಭಾರತೀಯ ಸೇನೆಯ ಬ್ರಹ್ಮಾಸ್ತ್ರಗಳಾಗಿರುವ ರಫೆಲ್, ಎಂಐ-17, ಮಿಗ್ 29 ಕೆ ಮೊದಲಾದ ಯುದ್ಧವಿಮಾನಗಳು ಏರ್ ಶೋನಲ್ಲಿ ಭಾಗವಹಿಸಲಿವೆ.