ಶಿವಮೊಗ್ಗ: ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಇದೇ ಮೊದಲ ಬಾರಿಗೆ ಮೂಲವ್ಯಾಧಿ ಮತ್ತು ಪಿಸ್ತೂಲ ಬಾಧೆಗೆ ಲೇಸರ್ ಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ ಎಂದು ಆಸ್ಪತ್ರೆಯ ಸರ್ಜನ್ ಡಾ. ಪ್ರವೀಣ್ ಕುಮಾರ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪೈಲ್ಸ್ ಎಂದು ಕರೆಯಲ್ಪಡುವ ಈ ಕಾಯಿಲೆ ಒಂದು ಸಮಸ್ಯೆಯಾಗಿಯೇ ಉಳಿದಿದೆ. ಇತ್ತೀಚೆಗೆ ಬಹಳ ಜನರಲ್ಲಿ ಇದು ಕಾಣಿಸಿಕೊಳ್ಳುತ್ತಿದೆ. ಇದರಿಂದ ರೋಗಿಗಳು ಕಿರಿ ಕಿರಿ ಅನುಭವಿಸುತ್ತಿದ್ದಾರೆ. ಈ ಮೂಲವ್ಯಾಧಿಗೆ ಅನೇಕ ರೀತಿಯ ಚಿಕಿತ್ಸೆಗಳು ಇದ್ದರೂ ಕೂಡ ಇದೀಗ ಹೊಸದಾಗಿ ಬಂದಿರುವ ಲೇಸರ್ ಚಿಕಿತ್ಸೆ ಅತ್ಯಂತ ಪರಿಣಾಮಕಾರಿಯಾಗಿದೆ ಎಂದರು.
ಲೇಸರ್ ಚಿಕಿತ್ಸೆ ತುಂಬಾ ಸುರಕ್ಷಿತವಾಗಿದೆ. ಯಾವುದೇ ರೀತಿಯ ಗಾಯಗಳಾಗುವುದಿಲ್ಲ. ದೇಹದ ಇತರ ಅಂಗಾಂಗಗಳಿಗೆ ಯಾವುದೇ ಹಾನಿಯಾಗುವುದಿಲ್ಲ. ತ್ವರಿತ ಚಿಕಿತ್ಸೆ ಹೊಲಿಗೆಗಳು ಇರುವುದಿಲ್ಲ. ಮರುಕಳಿಸುವಿಕೆಯ ಕಡಿಮೆ ಅಪಾಯವಿರುತ್ತದೆ. ಸೋಂಕು ಇರುವುದಿಲ್ಲ. ಹಾಗಾಗಿ ಲೇಸರ್ ಚಿಕಿತ್ಸೆ ಬಹಳ ಅತ್ಯುತ್ತಮ ಚಿಕಿತ್ಸೆಯಾಗಿದೆ. ಶಿವಮೊಗ್ಗದಲ್ಲಿ ನಮ್ಮ ಆಸ್ಪತ್ರೆಯಲ್ಲಿಯೇ ಮೊದಲ ಬಾರಿಗೆ ಈ ಚಿಕಿತ್ಸೆ ಯಶಸ್ವಿಯಾಗಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಮಾರ್ಕೆಟಿಂಗ್ ಮುಖ್ಯಸ್ಥ ಶೈಲೇಶ್ ಇದ್ದರು.