ಶ್ರೀಲಂಕಾದಲ್ಲಿ ನಡೆಯಲಿರುವ ಟಿ ಟ್ವೆಂಟಿ ಹಾಗೂ ಏಕದಿನ ಸರಣಿಗೆ ಈಗಾಗಲೇ ಭಾರತ ತಂಡದ ಆಟಗಾರರ ಪಟ್ಟಿ ಬಿಡುಗಡೆಯಾಗಿದ್ದು, ಇದೇ ಶನಿವಾರದಂದು ಮೊದಲ ಟಿ ಟ್ವೆಂಟಿ ಪಂದ್ಯ ನಡೆಯುತ್ತಿದೆ. ಕೋಚ್ ಗೌತಮ್ ಗಂಭೀರ್ ಹಾರ್ದಿಕ್ ಪಾಂಡ್ಯ ಸೇರಿದಂತೆ ಯುವ ಕ್ರಿಕೆಟಿಗರು ಈಗಾಗಲೇ ಶ್ರೀಲಂಕಾಗೆ ಆಗಮಿಸಿದ್ದಾರೆ. ಜುಲೈ 27ರಿಂದ ಜುಲೈ 30 ವರೆಗೆ ಮೂರು ಟಿ ಟ್ವೆಂಟಿ ಪಂದ್ಯವಿರಲಿದ್ದು, ಸೂರ್ಯಕುಮಾರ್ ಯಾದವ್ ನಾಯಕತ್ವ ವಹಿಸಿಕೊಂಡಿದ್ದಾರೆ.