alex Certify Big News: ಬೆಕ್ಕಿನಿಂದ ಅಪ್ಪ – ಮಗನಿಗೆ ಕೋವಿಡ್ ಸೋಂಕು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Big News: ಬೆಕ್ಕಿನಿಂದ ಅಪ್ಪ – ಮಗನಿಗೆ ಕೋವಿಡ್ ಸೋಂಕು

ಅನೇಕ ದೇಶಗಳಲ್ಲಿ ಕೋವಿಡ್-19 ಮತ್ತೆ ಹೆಚ್ಚಾಗತೊಡಗಿದೆ. ಜೂನ್ 29 ರಂದು ಬಿಡುಗಡೆಯಾಗಿರುವ ವಿಜ್ಞಾನ ನಿಯತಕಾಲಿಕೆ ನೇಚರ್ ವರದಿ ಪ್ರಕಾರ ಥೈಲ್ಯಾಂಡ್ ನಲ್ಲಿ ಬೆಕ್ಕಿನಿಂದ ಸೋಂಕು ಹರಡಿರುವ ಅಪರೂಪದ ಪ್ರಕರಣ ನಡೆದಿದೆ.

ಥೈಲ್ಯಾಂಡ್ ನ ಪ್ರಿನ್ಸ್ ಆಫ್ ಸೊಂಗ್ಕ್ಲಾ ಯೂನಿವರ್ಸಿಟಿಯ ಸಾಂಕ್ರಾಮಿಕ ರೋಗಗಳ ಸಂಶೋಧಕ ಸರುನ್ಯು ಚುಸ್ರಿ ಅವರು ನಡೆಸಿದ ಅಧ್ಯಯನದ ಪ್ರಕಾರ, ಆಗಸ್ಟ್ ನಲ್ಲಿ ತಂದೆ –ಮಗನಿಗೆ SARS-CoV-2 ಸೋಂಕು ಹರಡಿರುವುದು ದೃಢಪಟ್ಟಿದ್ದು, ಅವರನ್ನು ಐಸೋಲೇಶನ್ ನಲ್ಲಿಡಲಾಗಿತ್ತು. ಆಶ್ಚರ್ಯದ ವಿಚಾರವೆಂದರೆ ಅವರು ಸಾಕಿದ ಬೆಕ್ಕನ್ನು ಪರೀಕ್ಷಿಸಿದಾಗ ಪಾಸಿಟಿವ್ ಬಂದಿತ್ತು.

ಆಗಾಗ ಬೆಕ್ಕು ಸೀನುತ್ತಿತ್ತು. ಮೂರ್ನಾಲ್ಕು ದಿನಗಳವರೆಗೆ ಕೆಮ್ಮು, ಜ್ವರ ಮತ್ತು ಸೀನುತ್ತಿದ್ದುದನ್ನು ಗಮನಿಸಿ ಪರೀಕ್ಷಿಸಿದಾಗ ಅದಕ್ಕೆ ಪಾಸಿಟಿವ್ ಇರುವುದು ಪತ್ತೆಯಾಗಿದೆ. ವೈದ್ಯರು ಮಾಸ್ಕ್ ಹಾಕದೇ ಈ ಬೆಕ್ಕನ್ನು ಪರೀಕ್ಷಿಸುವ ವೇಳೆಯಲ್ಲಿ ಅದು ಸೀನಿದೆ. ಆದರೆ, ವೈದ್ಯರಿಗೆ ಯಾವುದೇ ರೀತಿಯ ಸೋಂಕು ಹರಡಿಲ್ಲ. ಹೀಗಾಗಿ ತಂದೆ – ಮಗನಿಗೆ ಬೆಕ್ಕಿನಿಂದ ಸೋಂಕು ಹರಡಿದೆಯೋ ಅಥವಾ ಇಲ್ಲವೋ ಎಂಬುದರ ಬಗ್ಗೆ ಇನ್ನೂ ಅಧ್ಯಯನಗಳು ನಡೆಯುತ್ತಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...