ಕಜಕಿಸ್ತಾನದ ಬಾಡಿ ಬಿಲ್ಡರ್ ಯುರಿ ತೊಲೊಚೊಕೊ, ಸೆಕ್ಸ್ ಡಾಲ್ ಮದುವೆಯಾಗಿ ಸುದ್ದಿಗೆ ಬಂದಿದ್ದರು. ಈ ಬಾರಿ ಕೂಡ ಮತ್ತೊಮ್ಮೆ ಯುರಿ ಚರ್ಚೆಗೆ ಬಂದಿದ್ದಾರೆ. ಈ ಬಾರಿಯ ಕಾರಣವೂ ವಿಚಿತ್ರವಾಗಿದೆ.
ಈ ಬಾರಿ ವಿಚಿತ್ರ ವಸ್ತುವಿನ ಮೇಲೆ ಬಾಡಿ ಬಿಲ್ಡರ್ ಗೆ ಪ್ರೀತಿ ಚಿಗುರಿದೆ. Ashtray ಮೇಲೆ ಪ್ರೀತಿ ಚಿಗುರಿದೆ ಎಂದು ಯುರಿ ಹೇಳಿಕೊಂಡಿದ್ದಾರೆ. ಯುರಿ, ಅದ್ರ ಫೋಟೋ ಮತ್ತು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಸಿಗರೇಟ್ ರೂಮಿನಲ್ಲಿ ಮೊದಲ ಬಾರಿ ಇದನ್ನು ನೋಡಿದೆ. ನೋಡಿದ ತಕ್ಷಣ ಆಕರ್ಷಿತನಾದೆ ಎಂದು ಯುರಿ ಬರೆದಿದ್ದಾನೆ. Ashtray ಅಂದ್ರೆ ಸಿಗರೇಟ್ ಬೂದಿಯನ್ನು ಹಾಕುವ ಸಣ್ಣ ತಟ್ಟೆಯಾಕಾರದ ಬಟ್ಟಲು. ಆದ್ರೆ ಯುರಿ ತೋರಿಸುತ್ತಿರುವ Ashtray ದೊಡ್ಡದಾಗಿದೆ. 36 ವರ್ಷದ ಯುರಿ, ಡಾಲ್ ನಿಂದ ಬೇರ್ಪಟ್ಟ ನಂತ್ರ ಹೊಸ ಜೀವನ ಶುರು ಮಾಡಲು ಬಯಸಿದ್ದಾರಂತೆ. ಆಸ್ಟ್ರೇ ಮದುವೆಯಾಗುವ ಇಚ್ಛೆ ಹೊಂದಿದ್ದಾರೆ.
ಮೊದಲು ಇದ್ರ ಜೊತೆ ಫೋಟೋ ಶೂಟ್ ಮಾಡಲು ಬಯಸಿದ್ದೆ. ನಂತ್ರ ಬಿಟ್ಟಿರಲು ಸಾಧ್ಯವಾಗ್ತಿಲ್ಲ. ಅದ್ರಿಂದ ಬರುವ ವಾಸನೆ ನನಗೆ ಇಷ್ಟವಾಗಿದೆ. ಅದನ್ನು ಸ್ಪರ್ಶಿಸಿದಾಗ ಖುಷಿಯಾಗುತ್ತದೆ ಎಂದು ಯುರಿ ಬರೆದುಕೊಂಡಿದ್ದಾರೆ. 2020ರಲ್ಲಿ ಸೆಕ್ಸ್ ಡಾಲ್ ಜೊತೆ ಅದ್ಧೂರಿಯಾಗಿ ಮದುವೆಯಾಗಿದ್ದ ಯುರಿ, ಸಾಕಷ್ಟು ಸುದ್ದಿ ಮಾಡಿದ್ದರು.