ಭಾರತದ ಮೊದಲ ಬುಲೆಟ್ ರೈಲು ಯೋಜನೆಯ ಭಾಗವಾಗಿ ನಿರ್ಮಾಣಗೊಳ್ಳಲಿರುವ ಮೊದಲ ನಿಲ್ದಾಣ ಸೂರತ್‌ನಲ್ಲಿ ತಲೆಯೆತ್ತಲಿದೆ. ಉದ್ದೇಶಿತ ನಿಲ್ದಾಣದ ಕಾಲ್ಪನಿಕ ಚಿತ್ರಗಳು ಅಂತರ್ಜಾಲದಲ್ಲಿ ವೈರಲ್ ಆಗಿವೆ.
ರೈಲ್ವೇ ಖಾತೆ ರಾಜ್ಯ ಸಚಿವೆ ದರ್ಶನಾ ಜರ್ದೋಶ್ ಈ ನಿಲ್ದಾಣದ ಕಾಲ್ಪನಿಕ ಚಿತ್ರಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ನಿಲ್ದಾಣದ ಹೊರಾಂಗಣ ಮತ್ತು ಒಳಾಂಗಣವನ್ನು ಹೊಳೆಯುವ ವಜ್ರದಂತೆ ವಿನ್ಯಾಸಗೊಳಿಸಲಾಗಿದೆ.
ಅಹಮದಾಬಾದ್-ಮುಂಬಯಿ ಬುಲೆಟ್ ರೈಲು ಮಾರ್ಗದಲ್ಲಿ ಮೊದಲು ನಿರ್ಮಾಣವಾಗಲಿರುವ ಈ ನಿಲ್ದಾಣ, ಕಾರಿಡಾರ್‌ನಲ್ಲಿ ಬರುವ 12 ನಿಲ್ದಾಣಗಳಲ್ಲಿ ಒಂದಾಗಿದೆ. ಸೂರತ್, ವಡೋದರಾ, ಆನಂದ್, ಅಹಮದಾಬಾದ್, ಸಾಬರಮತಿ, ಬಿಲಿಮೋರಾ, ಭಾರುಚ್, ಮುಂಬಯಿ, ಥಾಣೆ, ವಿರಾರ್, ಬೋಯ್ಸಾರ್ ಮತ್ತು ವಾಪಿ ನಿಲ್ದಾಣಗಳನ್ನು ಈ ಹೈಸ್ಪೀಡ್ ಕಾರಿಡಾರ್ ಒಳಗೊಂಡಿದೆ.
BIG NEWS: ಇ-ರುಪಿ ಮಿತಿ 10 ಸಾವಿರದಿಂದ 1 ಲಕ್ಷ ರೂ. ಗಳಿಗೆ ಹೆಚ್ಚಳ
ಎರಡೂ ನಗರಗಳ ನಡವಿನ ಪ್ರಯಾಣದ ಅವಧಿಯನ್ನು ಈ ಹೈಸ್ಪೀಡ್ ರೈಲು ಕಾರಿಡಾರ್ 2.07 ಗಂಟೆ (ಸೀಮಿತ ನಿಲುಗಡೆ) ಹಾಗೂ 2.58 ಗಂಟೆಗೆ (ಎಲ್ಲಾ ನಿಲ್ದಾಣಗಳಲ್ಲಿ ನಿಲುಗಡೆ) ತಗ್ಗಿಸಲಿದೆ.
ಈ ಬುಲೆಟ್ ರೈಲನ್ನು ಜಪಾನ್‌ನ ಶಿಂಕಾನ್ಸೆನ್ ತಂತ್ರಜ್ಞಾನದಲ್ಲಿ ಓಡಿಸಲಾಗುವುದು. ಗಂಟೆಗೆ ಗರಿಷ್ಠ 350ಕಿಮೀ ವೇಗದಲ್ಲಿ ಸಂಚರಿಸಬಲ್ಲ ಈ ಬುಲೆಟ್ ರೈಲು 320ಕಿಮೀ/ಗಂಟೆಯ ಗರಿಷ್ಠ ಕಾರ್ಯಾಚರಣಾ ವೇಗವನ್ನು ಕಾಪಾಡಿಕೊಳ್ಳಬಲ್ಲದು.
2017ರ ಸೆಪ್ಟೆಂಬರ್‌ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಹಮದಾಬಾದ್‌ನ ಸಾಬರಮತಿ ನಿಲ್ದಾಣದಲ್ಲಿ ಬುಲೆಟ್ ರೈಲು ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದರು. ಆ ವೇಳೆ ಜಪಾನ್ ಪ್ರಧಾನಿ ಶಿಂಜ಼ೋ ಅಬೆ ಸಹ ಉಪಸ್ಥಿತರಿದ್ದರು. 1.1 ಲಕ್ಷ ಕೋಟಿ ರೂಗಳ ಯೋಜನೆಯಲ್ಲಿ ನಿರ್ಮಾಣವಾಗುತ್ತಿರುವ ಈ ಯೋಜನೆಗೆ ಜಪಾನ್ ಸಾಲದ ನೆರವು ನೀಡುತ್ತಿದೆ.