ಯುವ ಶೋಧಕರಿಗೆಂದು ಮೊಟ್ಟ ಮೊದಲ ಹ್ಯಾಕಾಥಾನ್ ಆಯೋಜಿಸುತ್ತಿದೆ ಭಾರತೀಯ ವಿಶಿಷ್ಠ ಗುರುತಿನ ಪ್ರಾಧಿಕಾರ (ಯುಐಡಿಎಐ). ಅಕ್ಟೋಬರ್ 28ರಿಂದ 31 ರ ವರೆಗೂ ಈ ಹ್ಯಾಕಾಥಾನ್ ಜರುಗಲಿದೆ.
“ಆವಿಷ್ಕಾರವು ಜೀವನದ ಆಧಾರವಾಗಿದೆ. ಮುಕ್ತ ಮೂಲದ ತಂತ್ರಜ್ಞಾನದೊಂದಿಗೆ ಆವಿಷ್ಕಾರ ಬೆರೆತರೆ ನಿವಾಸಿಗಳು ಎದುರಿಸುವ ಕೆಲವೊಂದು ಸವಾಲುಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ. 2021ರ ಹ್ಯಾಕಾಥಾನ್ನಲ್ಲಿ ಬಂದು ಭಾಗವಹಿಸಿ ಭಾರತದ ಡಿಜಿಟಲ್ ಪಯಣದಲ್ಲಿ ಭಾಗಿಯಾಗಿ,” ಎಂದು ಆಧಾರ್ ಹ್ಯಾಕಾಥಾನ್ ಜಾಲತಾಣದಲ್ಲಿ ತಿಳಿಸಲಾಗಿದೆ.
ನಿಮಗೆ ಈ ಸಮಸ್ಯೆಗಳಿದ್ದರೆ ಹಾಲಿನಿಂದ ದೂರವಿರಿ
ನೋಂದಣಿ ಹಾಗೂ ಖಾತ್ರಿಪಡಿಸುವಿಕೆ ಎಂಬ ಎರಡು ಥೀಂಗಳಲ್ಲಿ ಕೇಳಲಾಗುವ ಸಮಸ್ಯೆಗಳನ್ನು ಭಾಗವಹಿಸಲಿರುವ ತಂಡಗಳು ಪರಿಹರಿಸಬೇಕಾಗುತ್ತದೆ. ಸಮಸ್ಯೆಯ ಹೇಳಿಕೆಗೆ ಅಗತ್ಯವಾದ ಕಾರ್ಯಾತ್ಮಕ ಕೋಡ್ಗಳ ರೂಪದಲ್ಲಿ ಪರಿಹಾರಗಳನ್ನು ನೀಡಬೇಕಾಗುತ್ತದೆ.
ಸ್ಫರ್ಧೆಯಲ್ಲಿ ಮೊದಲ ಬಹುಮಾನವಾಗಿ 3,00,000 ರೂ.ಗಳು, ದ್ವಿತೀಯ ಬಹುಮಾನವಾಗಿ 2,00,000 ರೂ.ಗಳು ಹಾಗೂ ತೃತೀಯ ಬಹುಮಾನವಾಗಿ 10,0000 ರೂ.ಗಳನ್ನು ತಲಾ ಎರಡು ತಂಡಗಳಿಗೆ ನೀಡಲಾಗುತ್ತದೆ.
ಸ್ಪರ್ಧೆಯಲ್ಲಿ ಜಯಶಾಲಿಯಾದ ತಂಡಗಳ ಸದಸ್ಯರಿಗೆ ಆಧಾರ್ 2.0 ಅಭಿಯಾನದಲ್ಲಿ ಭಾಗಿಯಾದ ತಂಡದೊಂದಿಗೆ ಕೆಲಸ ಮಾಡುವ ಅವಕಾಶ ಸಿಗುತ್ತದೆ. ಭಾಗವಹಿಸುವ ಎಲ್ಲಾ ತಂಡಗಳಿಗೆ ಪ್ರಮಾಣಪತ್ರಗಳು ಸಿಗಲಿವೆ.