ಗುರುಗ್ರಾಮ: ತನ್ನ ಕೋವಿಡ್ ಲಸಿಕೆ ಪ್ರಮಾಣ ಪತ್ರ ತೋರಿಸಿದರೂ ಅಧಿಕಾರಿಗಳು ಬೇರೆ-ಬೇರೆ ಲಸಿಕೆ ನೀಡಿರುವುದಾಗಿ ಹರಿಯಾಣದ 20 ವರ್ಷದ ಯುವಕನೊಬ್ಬ ಆರೋಪಿಸಿದ್ದಾನೆ.
ಹರ್ತೀರತ್ ಸಿಂಗ್ ಎಂಬುವವರು ಟ್ವೀಟ್ ಮಾಡಿದ್ದು, ಮೊದಲನೆಯದು ಕೋವ್ಯಾಕ್ಸಿನ್ ಲಸಿಕೆ, ಎರಡನೇ ಲಸಿಕೆ ತೆಗೆದುಕೊಳ್ಳುವಾಗ ಲಸಿಕೆ ಪ್ರಮಾಣ ಪತ್ರ ತೋರಿಸಿದರೂ ಕೋವಿಶೀಲ್ಡ್ ಲಸಿಕೆ ನೀಡಿದ್ದಾರೆ. ತಾನು ಏನು ಮಾಡಬೇಕು ಅನ್ನೋ ಬಗ್ಗೆ ತುರ್ತಾಗಿ ಸಲಹೆ ನೀಡಿ ಎಂಬುದಾಗಿ ಕೇಳಿಕೊಂಡಿದ್ದಾರೆ.
“ಫೋನಿನ ಮುಖಾಂತರ ಲಸಿಕೆ ಪ್ರಮಾಣ ಪತ್ರ ತೋರಿಸಿದಾಗ, ಅದನ್ನು ನೋಡಿದ ಸಿಬ್ಬಂದಿ ನಂತರ ಲಸಿಕೆ ಹಾಕಿದ್ದಾರೆ. ಬಳಿಕ 2ನೇ ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದಿದ್ದಕ್ಕೆ ಅಭಿನಂದನೆ ಎಂದು ಹೇಳಿದ್ದಾರೆ. ನನಗೆ ಕೋವಿಶೀಲ್ಡ್ ನೀಡಲಾಗಿದೆ ಎಂದು ಹೇಳಿದ ತಕ್ಷಣ ನನಗೆ ಗಾಬರಿಯಾಯ್ತು. ನಂತರ ನನ್ನನ್ನು ಸುಮಾರು 2 ಗಂಟೆಗಳವರೆಗೆ ವೀಕ್ಷಣೆಗೆ ಒಳಪಡಿಸಿದರು” ಎಂದು ಹೇಳಿದ್ದಾರೆ.
ಅಬ್ಬಾ…..! ಒಂದು ವರ್ಷದ ಮಗು ಎತ್ತಿದ ಚೆಂಡಿನ ತೂಕ ಎಷ್ಟು ಗೊತ್ತಾ…..?: ಭವಿಷ್ಯದ ಒಲಿಂಪಿಯನ್ ಅಂದ್ರು ನೆಟ್ಟಿಗರು..!
ಈ ಸಂಬಂಧ ಕುಟುಂಬದ ವೈದ್ಯರ ಜೊತೆ ಮಾತನಾಡಿರುವ ಹರ್ತೀರತ್ ಸಿಂಗ್, ಅಡ್ಡಪರಿಣಾಮಗಳನ್ನು ಪರೀಕ್ಷಿಸಲು ಇನ್ನೊಂದು ದಿನ ಕಾಯುವಂತೆ ತಿಳಿಸಿದ್ದಾರಂತೆ. ಇನ್ನು ಈ ಸಂಬಂಧ ಪ್ರಕರಣದ ವಿಚಾರಣೆ ನಡೆಸುವುದಾಗಿ ಮುಖ್ಯ ವೈದ್ಯಕೀಯ ಅಧಿಕಾರಿ ವೀರೇಂದ್ರ ಯಾದವ್ ತಿಳಿಸಿದ್ದಾರೆ.