
ಟೋಕಿಯೋದತ್ತ ಧಾವಿಸಲಿರುವ ಭಾರತೀಯ ಒಲಿಂಪಿಕ್ ಪಡೆಯ ಮೊದಲ ತಂಡ ಜುಲೈ 14ರಂದು ಜಪಾನ್‌ನತ್ತ ಹೊರಡಲಿದೆ ಎಂದು ಭಾರತೀಯ ಒಲಿಂಪಿಕ್ ಸಂಸ್ಥೆಯ ಮಹಾಕಾರ್ಯದರ್ಶಿ ರಾಜೀವ್ ಮೆಹ್ತಾ ತಿಳಿಸಿದ್ದಾರೆ.
ಏರ್ ಇಂಡಿಯಾದ ಚಾರ್ಟರ್ಡ್ ಫ್ಲೈಟ್ ಒಂದರಲ್ಲಿ ಈ ತಂಡ ಟೋಕಿಯೋದತ್ತ ಪಯಣ ಬೆಳೆಸಲಿದೆ. ಜುಲೈ 16-19ರ ನಡುವೆ ಮಿಕ್ಕ ಅಥ್ಲೀಟ್‌ಗಳು ಟೋಕಿಯೋ ತಲುಪಲಿದ್ದಾರೆ ಎಂದು ಮೆಹ್ತಾ ತಿಳಿಸಿದ್ದಾರೆ.
ಟೋಕಿಯೋ ತಲುಪುತ್ತಲೇ ಎಲ್ಲಾ ಅಥ್ಲೀಟ್‌ಗಳು ಹಾಗೂ ಅಧಿಕಾರಿಗಳು ಮೂರು ದಿನಗಳ ಮಟ್ಟಿಗೆ ಕ್ವಾರಂಟೈನ್ ಆಗಲಿದ್ದಾರೆ. ಜುಲೈ 23ರಿಂದ ಆಗಸ್ಟ್ 8ರ ವರೆಗೂ ಟೋಕಿಯೋ ಒಲಿಂಪಿಕ್ಸ್ ಜರುಗಲಿದೆ.