ಇದೇ ವಾರದಲ್ಲಿ ಜಾಗತಿಕ ಪಾದಾರ್ಪಣೆ ಮಾಡಿರುವ ಆಸ್ಟನ್ ಮಾರ್ಟಿನ್ DB12 ಅನ್ನು ಕ್ಯಾನ್ಸ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಂದರ್ಭದಲ್ಲಿ ಹರಾಜು ಹಾಕಲಾಗಿದೆ. ಹರಾಜಿನಲ್ಲಿ $1.6 ದಶಲಕ್ಷಕ್ಕೆ (₹13.2 ಕೋಟಿ) ಈ ಕಾರು ಬಿಕರಿಯಾಗಿದೆ.
ಹರಾಜಿನಲ್ಲಿ ಸಂಗ್ರಹವಾದ ಹಣವನ್ನು ಏಡ್ಸ್ ಸಂಶೋಧನೆಯಲ್ಲಿರುವ ಪ್ರತಿಷ್ಠಾನವೊಂದಕ್ಕೆ ನೀಡಲಾಗಿದೆ.
DB11ಗಿಂತ ಹೆಚ್ಚಿನ ಶಕ್ತಿಯನ್ನು ಉತ್ಪಾದಿಸಬಲ್ಲ DB12, ಮರ್ಸಿಡಿಸ್‌ನಿಂದ ಎರವಲು ಪಡೆದ 4.0 ಲೀ ಅವಳಿ ಟರ್ಬೋ ವಿ8 ಇಂಜಿನ್ ಮೂಲಕ 671ಬಿಎಚ್‌ಪಿ ಶಕ್ತಿ ಹಾಗೂ 800 ಎನ್‌ಎಂ ಟಾರ್ಕ್ ಉತ್ಪಾದಿಸಬಲ್ಲದು.
ಇದರೊಂದಿಗೆ 8-ಸ್ಪೀಡ್ ಆಟೋಮ್ಯಾಟಿಕ್ ಟ್ಯಾನ್ಸ್‌ಮಿಶನ್‌ನ ಬಲವನ್ನು DB12 ಹೊಂದಿದೆ. ಶೂನ್ಯದಿಂದ 100ಕಿಮೀ/ಗಂಟೆ ವೇಗವನ್ನು ಕೇವಲ 3.5 ಸೆಕೆಂಡ್‌ಗಳಲ್ಲಿ ಪಡೆಯಬಲ್ಲದು ಈ ಸೂಪರ್ ಟೂರರ್. 2024ರಲ್ಲಿ ಭಾರತದ ಮಾರುಕಟ್ಟೆಗೆ DB12 ಲಗ್ಗೆ ಇಡುವ ನಿರೀಕ್ಷೆ ಇದೆ.