alex Certify ಡೆಂಗ್ಯೂ ಹತ್ತಿಕ್ಕಲು ಗ್ಯಾಂಬುಸಿಯಾ ಮೀನುಗಳ ಮೊರೆ ಹೋದ ಫಿರೋಜಾಬಾದ್ ಆಡಳಿತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡೆಂಗ್ಯೂ ಹತ್ತಿಕ್ಕಲು ಗ್ಯಾಂಬುಸಿಯಾ ಮೀನುಗಳ ಮೊರೆ ಹೋದ ಫಿರೋಜಾಬಾದ್ ಆಡಳಿತ

ಕೊರೊನಾ ಸಾಂಕ್ರಾಮಿಕದ ಹಾವಳಿ ನಡುವೆ ಉತ್ತರಪ್ರದೇಶದ ಫಿರೋಜಾಬಾದ್‍ನಲ್ಲಿ ಡೆಂಗ್ಯೂ, ವೈರಲ್ ಜ್ವರದ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿವೆ. ಈಗಾಗಲೇ 51 ಜನರು ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ಭಾರಿ ಆತಂಕದ ಸ್ಥಿತಿ ಇದೆ. ಡೆಂಗ್ಯೂ ನಿಯಂತ್ರಣಕ್ಕೆ ಸೋಂಕು ಹರಡುವ ಸೊಳ್ಳೆಗಳನ್ನು ಹತ್ತಿಕ್ಕುವುದು ಬಹಳ ಅಗತ್ಯವಾಗಿದೆ. ಹೀಗಾಗಿ ಫಿರೋಜಾಬಾದ್ ಮುಖ್ಯ ವೈದ್ಯಾಧಿಕಾರಿ ವಿಶೇಷ ಉಪಾಯದ ಮೊರೆ ಹೋಗಿದ್ದಾರೆ.

ಸೊಳ್ಳೆಗಳ ಸಂತಾನೋತ್ಪತ್ತಿ ಆಗುವುದು ಕೆರೆಗಳು, ಹಳ್ಳಗಳು, ಕೂಲರ್‍ಗಳಿಂದ ಹೊರಬಿದ್ದು ಸಂಗ್ರಹವಾಗುವ ನೀರು ಮತ್ತು ಸಿಹಿ ನೀರು ಬಹಳ ಕಾಲದಿಂದ ನಿಂತ ಸ್ಥಳಗಳಲ್ಲಿ. ಅಲ್ಲಿ ಸೊಳ್ಳೆಯ ಮರಿಗಳು ಲಾರ್ವಾದಿಂದ ಹೊರಬೀಳುತ್ತವೆ. ಇಂಥ ಸೊಳ್ಳೆಯ ಮರಿಗಳನ್ನೇ ನಾಶ ಮಾಡಿದರೆ, ಸೊಳ್ಳೆಗಳ ಸಂಖ್ಯೆ ಏಕಾಏಕಿ ಕಡಿಮೆಯಾಗಿ ಡೆಂಗ್ಯೂ ಹರಡುವಿಕೆ ನಿಲ್ಲುತ್ತದೆ ಎಂಬ ಉಪಾಯ ವೈದ್ಯಾಧಿಕಾರಿ ದಿನೇಶ್ ಕುಮಾರ್ ಅವರದ್ದು.

SHOCKING NEWS: ಕೊರೊನಾ 3ನೇ ಅಲೆ ನಡುವೆಯೇ ಕಲಬುರ್ಗಿಯಲ್ಲಿ ಡೆಂಗ್ಯೂ ಅಟ್ಟಹಾಸ

ಹಾಗಾಗಿ ಸೊಳ್ಳೆಗಳ ಲಾರ್ವಾಗಳನ್ನೇ ಪ್ರಮುಖ ಆಹಾರವನ್ನಾಗಿ ಸೇವಿಸುವ ಮಸ್ಕಿಟೊಫಿಷ್ ಅಥವಾ ಗ್ಯಾಂಬುಸಿಯಾ ಮೀನುಗಳನ್ನು ತರಿಸಿದ ಫಿರೋಜಾಬಾದ್ ಜಿಲ್ಲಾಡಳಿತವು ಜಿಲ್ಲೆಯ ಬಹುತೇಕ ಕೆರೆಗಳು, ಕಾಲುವೆಗಳಲ್ಲಿ ಬಿಟ್ಟಿದೆ. ಈ ಒಂದು ಮೀನು ದಿನವೊಂದಕ್ಕೆ 100 ಸೊಳ್ಳೆಮರಿಗಳನ್ನು ನುಂಗುತ್ತದೆ. ಮಲೇರಿಯಾ ನಿಯಂತ್ರಣಕ್ಕೂ ಈ ಕ್ರಮ ಪರಿಣಾಮಕಾರಿಯಾಗಿದೆ. ಈ ಹಿಂದೆ ಬರೇಲಿ ಮತ್ತು ಬದೌನ್ ಜಿಲ್ಲೆಗಳಲ್ಲಿ ಪ್ರಯೋಗ ಯಶಸ್ವಿಯಾಗಿದೆ ಎಂದು ವೈದ್ಯಾಧಿಕಾರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...