
ಬೆಂಗಳೂರು: ಬೆಂಗಳೂರಿನಲ್ಲಿ ಕುಖ್ಯಾತ ರೌಡಿ ಶೀಟರ್ ಸ್ಯಾಮುಯಲ್ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಅಮೃತಹಳ್ಳಿ ಪೊಲೀಸರಿಂದ ಸಂಪಿಗೆಹಳ್ಳಿ ಸಮೀಪ ಫೈರಿಂಗ್ ಮಾಡಲಾಗಿದೆ.
ಸಂಪಿಗೆಹಳ್ಳಿಯಲ್ಲಿ ಸ್ಯಾಮುಯಲ್ ಇರುವ ಬಗ್ಗೆ ಮಾಹಿತಿ ಪಡೆದು ಬಂಧಿಸಲು ತೆರಳಿದ್ದಾಗ ಅಮೃತಹಳ್ಳಿ ಠಾಣೆ ಪಿಎಸ್ಐ ಪ್ರಕಾಶ್ ಅವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಸ್ಯಾಮುಯಲ್ ಯತ್ನಿಸಿದ್ದು, ಈ ವೇಳೆ ಇನ್ಸ್ ಪೆಕ್ಟರ್ ಗುರುಪ್ರಸಾದ್ ಫೈರಿಂಗ್ ಮಾಡಿದ್ದಾರೆ.
ಗಾಯಗೊಂಡ ಸ್ಯಾಮುಯಲ್ ನನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈತ 8 ಪ್ರಕರಣಗಳಲ್ಲಿ ಬೇಕಾಗಿದ್ದನೆನ್ನಲಾಗಿದೆ. ಗಾಯಾಳು ಪಿಎಸ್ಐ ಪ್ರಕಾಶ್ ಅವರನ್ನೂ ಯಲಹಂಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.