
ಕಾರವಾರ: ಗುಂಡು ಹಾರಿಸಿ ತಾಯಿ ಮತ್ತು ತಂಗಿಯನ್ನು ಯುವಕ ಹತ್ಯೆ ಮಾಡಿದ್ದಾನೆ. ಸಾಂಬಾರು ಸರಿಯಾಗಿ ಮಾಡಿಲ್ಲವೆಂದು ಮದ್ಯದ ನಶೆಯಲ್ಲಿ ಇಂತಹ ಕೃತ್ಯವೆಸಗಿದ್ದಾನೆ. ದೊಡ್ಡಮನೆ ಗ್ರಾಮದ ಕುರುಗೋಡು ಬಳಿ ಡಬಲ್ ಮರ್ಡರ್ ಮಾಡಲಾಗಿದೆ.
ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಕುರುಗೋಡು ನಿವಾಸಿ ಪಾರ್ವತಿ ನಾರಾಯಣ ಹಸ್ಲರ್, ರಮ್ಯಾ ನಾರಾಯಣ ಅವರನ್ನು ಮಂಜುನಾಥ ಕೊಲೆ ಮಾಡಿದ್ದಾನೆ. ತಾಯಿ ಮತ್ತು ತಂಗಿಗೆ ಗುಂಡು ಹಾರಿಸಿ ಕೊಲೆ ಮಾಡಿದ್ದು ಆರೋಪಿಯನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆನ್ನಲಾಗಿದೆ.