ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಆನೆ ಬಲರಾಮನ ಮೇಲೆ ಫೈರಿಂಗ್ ಮಾಡಿದ್ದ ಜಮೀನು ಮಾಲಿಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಸುರೇಶ್ ಬಂಧಿತ ಆರೋಪಿ. ಪಿರಿಯಾಪಟ್ಟಣದ ಭೀಮನಕಟ್ಟೆ ಸಾಕಾನೆ ಶಿಬಿರದ ಸಮೀಪ ಇರುವ ಜಮೀನಿಗೆ ಬಲರಾಮ ಆನೆ ಹೋಗಿತ್ತು. ಈ ವೇಳೆ ಜಮೀನಿಗೆ ಬಂದ ಆನೆ ಮೇಲೆ ಜಮೀನು ಮಾಲೀಕ ಸುರೇಶ್ ಸಿಂಗಲ್ ಬ್ಯಾರಲ್ ಬಂದೂಕಿನಿಂದ ಗುಂಡು ಹಾರಿಸಿದ್ದ.
ಇದರಿಂದ ಬಲರಾಮ ಆನೆಯ ತೊಡೆಯ ಭಾಗಕ್ಕೆ ಗುಂಡೇಟು ತಗುಲಿತ್ತು. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಪಶುವೈದ್ಯಾಧಿಕಾರಿ ಡಾ.ಸುರೇಶ್ ಆನೆಗೆ ಚಿಕಿತ್ಸೆ ನೀಡಿದ್ದು, ಬಲರಾಮ ಚೇತರಿಸಿಕೊಂಡಿದ್ದಾನೆ. ವನ್ಯಜೀವಿ ಕಾಯ್ದೆ ಉಲ್ಲಂಘನೆ ಆರೋಪದಶಿ ಪೊಲೀಸರು ಸುರೇಶ್ ನನ್ನು ಬಂಧಿಸಿದ್ದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಆರೋಪಿ ಸುರೇಶ್ ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.