ವಿನಾಕಾರಣ ಉದ್ಯೋಗದಿಂದ ವಜಾಗೊಳಿಸಿದ ವೇಳೆ ನೊಂದ ಉದ್ಯೋಗಿಗಳು ತನ್ನ ಮಾಲೀಕನನ್ನು ಬೈದುಕೊಂಡು ಮತ್ತೊಂದು ಕೆಲಸ ಹುಡುಕಲು ಮುಂದಾಗುತ್ತಾರೆ. ಆದರೆ ಇಲ್ಲೊಬ್ಬ ಕಂಡಕ್ಟರ್ ಮಾಡಿದ ಕೆಲಸ ಮಾತ್ರ ಎಲ್ಲರಲ್ಲೂ ನಗು ತರಿಸಿದೆ. ಅಷ್ಟಕ್ಕೂ ಅವನು ಮಾಡಿದ್ದೇನು ಗೊತ್ತಾ ? ಹಾಗಾದ್ರೆ ಮುಂದೆ ಓದಿ.
ಹೌದು ಇಂತಹದೊಂದು ಘಟನೆ ಇಂದೋರ್ ಬಸ್ ನಿಲ್ದಾಣದಲ್ಲಿ ನಡೆದಿದ್ದು, ನವದೆಹಲಿ ಮೂಲದ ಡಾಕ್ಯುಮೆಂಟರಿ ಛಾಯಾಗ್ರಾಹಕ ರೋಷನ್ ಅಬ್ಬಾಸ್ ಎಂಬವರು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಇದರ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ತರೆಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.
ಇವರು ಹಂಚಿಕೊಂಡಿರುವ ವಿಡಿಯೋದಲ್ಲಿ ಬಸ್ ನ ಎಲ್ಇಡಿ ಡಿಸ್ಪ್ಲೇ ಇದ್ದು, ಸಾಮಾನ್ಯವಾಗಿ ಯಾವ್ಯಾವ ಮಾರ್ಗದಲ್ಲಿ ಸಂಚರಿಸುತ್ತದೆ ಎಂಬುದರ ವಿವರ ಇದರಲ್ಲಿರುತ್ತದೆ. ಆದರೆ ಈ ಬಸ್ಸಿನ ಕಂಡಕ್ಟರ್ ಕೆಲಸದಿಂದ ವಜಾಗೊಂಡಿದ್ದ ಎನ್ನಲಾಗಿದ್ದು, ಹೀಗಾಗಿ ಡಿಸ್ಪ್ಲೇ ನಲ್ಲಿ ತನ್ನ ಮಾಲೀಕನ ವಿರುದ್ಧ ಅಶ್ಲೀಲ ಸಂದೇಶ ಬರೆದಿದ್ದಾನೆ. ಅಷ್ಟೇ ಅಲ್ಲ ಪಾಸ್ವರ್ಡ್ ಕೂಡ ಬದಲಿಸಿದ್ದಾನೆ.
ಇದರಿಂದ ಇದೆ ಡಿಸ್ಪ್ಲೇ ನೊಂದಿಗೆ ಈ ಬಸ್ ಊರೆಲ್ಲಾ ಸಂಚರಿಸಿದ್ದು, ಮಾಲೀಕನ ಮಾನ ಹರಾಜಾಗಿದೆ. ಇದೀಗ ಬಸ್ ಮಾಲೀಕ ಕಂಡಕ್ಟರ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾನೆ ಎನ್ನಲಾಗಿದೆ. ಆದರೆ ಇದನ್ನು ನೋಡಿದ ನೆಟ್ಟಿಗರು, ಡಿಸ್ಪ್ಲೇ ಆಫ್ ಮಾಡಬಹುದಾಗಿತ್ತು ಅಥವಾ ಕಂಡಕ್ಟರ್ ಪಾಸ್ವರ್ಡ್ ಬದಲಿಸಿದ್ದರೆ ರಿಸೆಟ್ ಮಾಡಬಹುದಾಗಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
https://twitter.com/Roshan_Abbas_/status/1582803603621715968?ref_src=twsrc%5Etfw%7Ctwcamp%5Etweetembed%7Ctwterm%5E1582803603621715968%7Ctwgr%5E317fbb7546abb9336f8d2cc5627fe60627ba2b7e%7Ctwcon%5Es1_&ref_url=https%3A%2F%2Fwww.indiatimes.com%2Ftrending%2Fwtf%2Ffired-from-job-bus-conductor-leaves-expletive-on-sign-intended-for-owner-582543.html%3Futm_source%3Dmsn.com
https://twitter.com/Roshan_Abbas_/status/1582956485767593985?ref_src=twsrc%5Etfw%7Ctwcamp%5Etweetembed%7Ctwterm%5E1582973639653085185%7Ctwgr%5E317fbb7546abb9336f8d2cc5627fe60627ba2b7e%7Ctwcon%5Es2_&ref_url=https%3A%2F%2Fwww.indiatimes.com%2Ftrending%2Fwtf%2Ffired-from-job-bus-conductor-leaves-expletive-on-sign-intended-for-owner-582543.html%3Futm_source%3Dmsn.com