
ಬೆಳಗಾವಿ: ಪ್ಯಾಂಟ್ ಜೇಬಲ್ಲಿದ್ದ ಪಟಾಕಿ ಸಿಡಿದು ಬಾಲಕನೊಬ್ಬ ಗಾಯಗೊಂಡ ಘಟನೆ ಬೆಳಗಾವಿಯಲ್ಲಿ ನಡೆದಿದೆ. 12 ವರ್ಷದ ಹನುಮಂತ ಗಾಯಗೊಂಡ ಬಾಲಕ ಎಂದು ಹೇಳಲಾಗಿದೆ.
ಪಟಾಕಿಗೆ ಬೆಂಕಿ ಹಚ್ಚಿ ಹನುಮಂತ ಎಸೆದಿದ್ದಾನೆ. ನಂತರ ಅದಕ್ಕೆ ಬೆಂಕಿ ತಗುಲಿಲ್ಲವೆಂದು ತಿಳಿದುಕೊಂಡು ತನ್ನ ಜೇಬಿನಲ್ಲಿ ಇಟ್ಟುಕೊಂಡಿದ್ದಾನೆ. ಜೇಬಿನಲ್ಲಿದ್ದ ಪಟಾಕಿ ಸಿಡಿದು ಗುಪ್ತಾಂಗಕ್ಕೆ ಗಾಯವಾಗಿದೆ. ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.