ಚಾಮರಾಜನಗರ: ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಲಕ್ಕರಸಪಾಳ್ಯ ಗ್ರಾಮದಲ್ಲಿ ಕೊಂಡ ಹಾಯುವಾಗ ಬಿದ್ದು ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ.
ಮಾರಿ ಹಬ್ಬದ ಕೊಂಡೋತ್ಸವದಲ್ಲಿ ಕಂಡಾಯ ಹೊತ್ತಿದ್ದ ಕೆಂಪನ ಪಾಳ್ಯ ಗ್ರಾಮದ ತಂಬಡಿ ಮಲ್ಲಣ್ಣ ಅವರು ಆಯತಪ್ಪಿ ಬಿದ್ದು ಗಾಯಗೊಂಡಿದ್ದಾರೆ. ಕೆಂಡದ ಮೇಲೆ ಬಿದ್ದ ಮಲ್ಲಣ್ಣ ಅವರನ್ನು ಕೂಡಲೇ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಲ್ಲಣ್ಣ ಕೆಂಡದ ಮೇಲೆ ಬಿದ್ದು ಚೀರಾಡುವುದನ್ನು ಕಂಡ ಜನ ಆತಂಕಕ್ಕೆ ಒಳಗಾಗಿದ್ದಾರೆ.