ರಿಯಾದ್ ನಿಂದ ಹೊರಟಿದ್ದ ಸೌದಿ ಏರ್ ಲೈನ್ಸ್ ವಿಮಾನವು ಪಾಕಿಸ್ತಾನದ ಪೇಶಾವರದ ಬಚಾ ಖಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಬೆಂಕಿ ಕಾಣಿಸಿಕೊಂಡಿದೆ.
ಎಲ್ಲಾ 276 ಪ್ರಯಾಣಿಕರು ಮತ್ತು 21 ಸಿಬ್ಬಂದಿಯನ್ನು ತ್ವರಿತವಾಗಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಪ್ರಾಧಿಕಾರ (ಸಿಎಎ) ತಿಳಿಸಿದೆ ಎಂದು ಪಾಕಿಸ್ತಾನ ಮೂಲದ ಡಾನ್ ಪತ್ರಿಕೆ ವರದಿ ಮಾಡಿದೆ.
ಸಿಎಎ ವಕ್ತಾರ ಸೈಫುಲ್ಲಾ ಅವರ ಪ್ರಕಾರ, ವಿಮಾನ ಇಳಿಯುತ್ತಿದ್ದಂತೆ ವಿಮಾನದ ಎಡ ಲ್ಯಾಂಡಿಂಗ್ ಗೇರ್ನಿಂದ ಹೊಗೆ ಮತ್ತು ಕಿಡಿಗಳು ಬರುತ್ತಿರುವುದನ್ನು ಗಮನಿಸಿದ ಏರ್ ಟ್ರಾಫಿಕ್ ಕಂಟ್ರೋಲರ್ಗಳು ಪೈಲಟ್ಗಳನ್ನು ಎಚ್ಚರಿಸಿದ್ದಾರೆ. ಅವರು ವಿಮಾನ ನಿಲ್ದಾಣದ ಅಗ್ನಿಶಾಮಕ ಸೇವೆಗಳಿಗೆ ಮಾಹಿತಿ ನೀಡಿದರು.
ಸಿಎಎ ಅಗ್ನಿಶಾಮಕ ವಾಹನಗಳು ತ್ವರಿತವಾಗಿ ಬಂದು ಲ್ಯಾಂಡಿಂಗ್ ಗೇರ್ನಲ್ಲಿದ್ದ ಬೆಂಕಿಯನ್ನು ನಂದಿಸಿದವು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.ಅಗ್ನಿಶಾಮಕ ವಾಹನವು ಸಮಯಕ್ಕೆ ಸರಿಯಾಗಿ ಕಾರ್ಯನಿರ್ವಹಿಸಿದವು ಮತ್ತು ತಕ್ಷಣ ಲ್ಯಾಂಡಿಂಗ್ ಗೇರ್ನಲ್ಲಿ ಬೆಂಕಿಯನ್ನು ನಿಯಂತ್ರಿಸಿ, ವಿಮಾನವನ್ನು ದೊಡ್ಡ ಅಪಘಾತದಿಂದ ರಕ್ಷಿಸಿದವು. ಎಲ್ಲಾ 276 ಪ್ರಯಾಣಿಕರು ಮತ್ತು 21 ಸಿಬ್ಬಂದಿಯನ್ನು ಗಾಳಿ ತುಂಬಿದ ಸ್ಲೈಡ್ನೊಂದಿಗೆ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.