ಸುದ್ದಿ ನೇರ ಪ್ರಸಾರದ ವೇಳೆ ಆಗುವ ಬ್ಲೂಪರ್ಗಳು ವೀಕ್ಷಕರಿಗೆ ಬಲೇ ಮಜಾ ಕೊಡುತ್ತವೆ.
ಹವಾಮಾನ ವರದಿಗಾರ ಜೂಡ್ ರೆಡ್ಫೀಲ್ಡ್ ಹೆಸರಿನ ಈತ ಕೆಂಟುಕಿಯಲ್ಲಿ ಅಧಿಕ ತಾಪಮಾನದ ಬಗ್ಗೆ ನೇರ ಪ್ರಸಾರದ ವೇಳೆ ಮಾತನಾಡುತ್ತಿರುವ ವೇಳೆ ಕೈಯಲ್ಲೊಂದು ಅಗ್ನಿನಿವಾರಕ ಉಪಕರಣ ತಂದಿದ್ದಾರೆ. ಆದರೆ ತಾಪಮಾನದ ಬಗ್ಗೆ ತಾನು ಮಾಡಲು ಹೊರಟ ಜೋಕ್ ತನಗೇ ಎದುರೇಟು ನೀಡುವ ಸಾಧ್ಯತೆ ಇದೆ ಎನ್ನುವುದು ಆತ ಕನಸಿನಲ್ಲೂ ನಿರೀಕ್ಷಿಸಿರಲಿಲ್ಲ.
ರಾಜ್ಯಸಭಾ ಸದಸ್ಯ, ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫರ್ನಾಂಡಿಸ್ ವಿಧಿವಶ
ನೋಡ ನೋಡುತ್ತಲೇ ಆತನ ಎದುರೇ ಭುಗ್ಗೆಂದು ಸಿಡಿದ ಅಗ್ನಿನಿವಾರಕ ಉಪಕರಣ ಎಲ್ಲೆಡೆ ಧೂಮ ಆವರಿಸುವಂತೆ ಮಾಡಿದೆ.
ಈ ಬ್ಲೂಪರ್ಅನ್ನು ಯೂಟ್ಯೂಬ್ನಲ್ಲಿ ಶೇರ್ ಮಾಡಲಾಗಿದ್ದು, 6175 ವೀವ್ಸ್ ಪಡೆದಿದೆ.
https://youtu.be/-eGECIqLNT8