ಮಂಗಳೂರು: ಜಗಳ ವಿಕೋಪಕ್ಕೆ ತಿರುಗಿ ತಂದೆಯೇ ಮಗನಿಗೆ ಬೆಂಕಿಹಚ್ಚಿ ಕೊಲೆಗೈದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಜಪ್ಪಿನಮೊಗರು ಗ್ರಾಮದ ಬಳಿ ನಡೆದಿದೆ.
ಕಂಕನಾಡಿ ಪೊಲೀಸ್ ಠಾಣೆ ಜಾತಿಯ ಕೊಪ್ಪರಿಗೆಗುತ್ತು ನಿವಾಸಿ ಸ್ವಾಮಿ ಶೆಟ್ಟಿ ಮೃತಪಟ್ಟ ವ್ಯಕ್ತಿ ಎಂದು ಹೇಳಲಾಗಿದೆ.
ಜೂನ್ 21 ರಂದು ರಾತ್ರಿ 11.30 ರ ಸುಮಾರಿಗೆ ಆತನ ತಂದೆ ವಿಶ್ವನಾಥ ಶೆಟ್ಟಿ ದನಗಳನ್ನು ಕಟ್ಟಿ ಹಾಕುವ ವಿಚಾರಕ್ಕೆ ಮಗನೊಂದಿಗೆ ಜಗಳವಾಡಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿದ್ದು, ವಿಶ್ವನಾಥ ಶೆಟ್ಟಿ ಮಗನ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಸ್ವಾಮಿ ಶೆಟ್ಟಿಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.