
ನವದೆಹಲಿ: ದೆಹಲಿಯ ಸೆಲೆಕ್ಟ್ ಸಿಟಿವಾಕ್ ಮಾಲ್ನಲ್ಲಿರುವ ಸಿನಿಮಾ ಹಾಲ್ನಲ್ಲಿ ಬುಧವಾರ ಸಂಜೆ ಸಿನಿಮಾ ಪ್ರದರ್ಶನದ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಸಂಜೆ 4:15 ಕ್ಕೆ ‘ಛಾವಾ’ ಚಿತ್ರದ ಪ್ರದರ್ಶನದ ಸಮಯದಲ್ಲಿ ಪಿವಿಆರ್ ಸಿನಿಮಾಸ್ನ ಸಿನಿಮಾ ಪರದೆಯ ಒಂದು ಭಾಗಕ್ಕೆ ಬೆಂಕಿ ಹೊತ್ತಿಕೊಂಡಿದ್ದರಿಂದ ಸಿನಿಮಾ ಪ್ರೇಕ್ಷಕರಲ್ಲಿ ಭಯ ಆವರಿಸಿತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಹಾಲ್ನಲ್ಲಿ ಬೆಂಕಿಯ ಎಚ್ಚರಿಕೆಗಳು ಮೊಳಗಲು ಪ್ರಾರಂಭಿಸಿದಾಗ, ಎಲ್ಲರೂ ನಿರ್ಗಮನ ಬಾಗಿಲುಗಳಿಗೆ ಧಾವಿಸಿದ್ದಾರೆ. ಸಿನಿಮಾ ಹಾಲ್ ನಿಂದ ಪ್ರೇಕ್ಷಕರನ್ನು ಸ್ಥಳಾಂತರಿಸಲಾಯಿತು. ಯಾರಿಗೂ ಯಾವುದೇ ಗಾಯಗಳಾಗಿಲ್ಲ.
ಸಂಜೆ 5:42 ಕ್ಕೆ ಬೆಂಕಿ ತಗುಲಿದೆ ಬಗ್ಗೆ ಕರೆ ಬಂದಿತು ಮತ್ತು ಆರು ಅಗ್ನಿಶಾಮಕ ದಳಗಳನ್ನು ಸ್ಥಳಕ್ಕೆ ಕಳುಹಿಸಲಾಯಿತು ಇದು ಸಣ್ಣ ಬೆಂಕಿಯಾಗಿದ್ದು, ಯಾವುದೇ ಗಾಯಗಳು ವರದಿಯಾಗಿಲ್ಲ. ಸಂಜೆ 5:55 ರ ಹೊತ್ತಿಗೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು ಎಂದು ದೆಹಲಿ ಅಗ್ನಿಶಾಮಕ ಸೇವೆಗಳ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸಾಕೇತ್ ಸಿಟಿವಾಕ್ ಮಾಲ್ ನಿಂದ ಸಂಜೆ 5.57 ಕ್ಕೆ ಬೆಂಕಿಯ ಬಗ್ಗೆ ನಮಗೆ ಕರೆ ಬಂದಿದ್ದು, ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಲಾಗಿದೆ. ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
VIDEO | A fire broke out at a cinema hall in Delhi’s Select CityWalk Mall during the screening of the film ‘Chhava’ earlier today. As fire alarms started ringing in the hall, everybody rushed to the exit doors. The cinema hall was evacuated.
(Source: Third Party)
(Full video… pic.twitter.com/eAqcJ7WzND
— Press Trust of India (@PTI_News) February 26, 2025