alex Certify ಅಪಾರ್ಟ್​ಮೆಂಟ್ ಅಗ್ನಿ ದುರಂತ ಕೇಸ್​ ಗೆ ಹೊಸ ಟ್ವಿಸ್ಟ್: ಫ್ಲಾಟ್​​ನಲ್ಲಿದ್ದ ಸಿಲಿಂಡರ್​ ಆಗೇ ಇರಲಿಲ್ಲ ಬ್ಲಾಸ್ಟ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪಾರ್ಟ್​ಮೆಂಟ್ ಅಗ್ನಿ ದುರಂತ ಕೇಸ್​ ಗೆ ಹೊಸ ಟ್ವಿಸ್ಟ್: ಫ್ಲಾಟ್​​ನಲ್ಲಿದ್ದ ಸಿಲಿಂಡರ್​ ಆಗೇ ಇರಲಿಲ್ಲ ಬ್ಲಾಸ್ಟ್​..!

ಬೆಂಗಳೂರಿನ ದೇವರಚಿಕ್ಕನಹಳ್ಳಿ ಬಳಿಯ ಆಶ್ರಿತ ಅಪಾರ್ಟ್​ಮೆಂಟ್​ನಲ್ಲಿ ನಡೆದ ಅಗ್ನಿದುರಂತ ಪ್ರಕರಣದಲ್ಲಿ ತಾಯಿ – ಮಗಳು ಸಜೀವ ದಹನವಾಗಿದ್ದಾರೆ. ಮೂರನೇ ಮಹಡಿಯಲ್ಲಿ ನಡೆದಿದ್ದ ಈ ಅಗ್ನಿ ಅವಘಡಕ್ಕೆ ಸಿಲಿಂಡರ್​ ಬ್ಲಾಸ್ಟ್​ ಆಗಿದ್ದೇ ಕಾರಣ ಎಂದು ಅಂದಾಜಿಸಲಾಗಿತ್ತು. ಆದರೆ ಫ್ಲಾಟ್​ನಲ್ಲಿದ್ದ ಎರಡೂ ಸಿಲಿಂಡರ್​ ಗಳು ಜೀವಂತವಾಗಿವೆ ಎಂದು ಸ್ವತಃ ಗೃಹ ಮಂತ್ರಿ ಅರಗ ಜ್ಞಾನೇಂದ್ರ ಮಾಹಿತಿ ನೀಡಿದ್ದಾರೆ.

ಅಗ್ನಿ ಅವಘಡದ ವಿಚಾರವಾಗಿ ಮಾತನಾಡಿದ ಅರಗ ಜ್ಞಾನೇಂದ್ರ, ಇದೊಂದು ದುರಾದೃಷ್ಟಕರ ಘಟನೆಯಾಗಿದೆ. ಈ ಪ್ರಕರಣ ನಮಗೆ ಸಾಕಷ್ಟು ವಿಚಾರಗಳ ಬಗ್ಗೆ ಕಣ್ತೆರೆಯುವಂತೆ ಮಾಡಿದೆ. ಸಿಲಿಂಡರ್​ ಬ್ಲಾಸ್ಟ್​ನಿಂದ ಈ ಅವಘಡ ಸಂಭವಿಸಿಲ್ಲ. ಫ್ಲಾಟ್​ನಲ್ಲಿದ್ದ ಎರಡೂ ಸಿಲಿಂಡರ್​ ಗಳು ಸರಿಯಾಗಿವೆ. ಹೀಗಾಗಿ ಅಗ್ನಿ ದುರಂತಕ್ಕೆ ನಿಖರ ಕಾರಣ ಏನು ಅನ್ನೋದ್ರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದ್ರು.

ಇದೇ ವೇಳೆ ಅಗ್ನಿಶಾಮಕ ದಳದ ಕಾರ್ಯದ ಬಗ್ಗೆಯೂ ಮಾತನಾಡಿದ ಸಚಿವ ಅರಗ ಜ್ಞಾನೇಂದ್ರ, ಅಪಾರ್ಟ್​ಮೆಂಟ್​​ಗಳು ಗಗನಚುಂಬಿ ಆಗುತ್ತಲೇ ಹೋಗ್ತಿವೆ. ಹೀಗಾಗಿ ಈಗಾಗಲೇ 50 ಮೀಟರ್​ ಎತ್ತರದ ಲಿಫ್ಟ್​ ಖರೀದಿ ಮಾಡಿದ್ದಾರೆ. 90 ಮೀಟರ್​ ಉದ್ದದ ಲಿಫ್ಟ್​ ಖರೀದಿ ಆಗಿದ್ದು ಇನ್ನೇನು ನಮ್ಮ ಕೈ ಸೇರಬೇಕಿದೆ. 90 ಕೋಟಿ ರೂಪಾಯಿ ನೀಡಿ ಸರ್ಕಾರ ಈ ಲಿಫ್ಟ್​ಗಳನ್ನು ಖರೀದಿ ಮಾಡಿದೆ. ಎತ್ತರದ ಪ್ರದೇಶದಲ್ಲಿ ಅಗ್ನಿ ದುರಂತ ಸಂಭವಿಸಿದಾಗ ಆ ಪ್ರದೇಶವನ್ನು ತಲುಪಲು ಈ ಲಿಫ್ಟ್​ಗಳು ಸಹಾಯ ಮಾಡುತ್ತವೆ ಎಂದು ಹೇಳಿದ್ರು.

ಇನ್ನು ಅಪಾರ್ಟ್​ಮೆಂಟ್​ ಅಜಾಗರೂಕತೆ ವಿಚಾರವಾಗಿಯೂ ಮಾತನಾಡಿದ ಅರಗ ಜ್ಞಾನೇಂದ್ರ, ಅಪಾರ್ಟ್​ಮೆಂಟ್​ನ ಮುಂದೆ ರಸ್ತೆ ಕೂಡ ಸರಿಯಾಗಿರಲಿಲ್ಲ ಎಂದು ತಿಳಿದುಬಂದಿದೆ. ಇದರಿಂದ ಅಗ್ನಿಶಾಮಕ ದಳ ವಾಹನಕ್ಕೆ ಸರಿಯಾದ ಸಮಯಕ್ಕೆ ಸ್ಥಳಕ್ಕೆ ತಲುಪಲು ಸಾಧ್ಯವಾಗೋದಿಲ್ಲ. ಹೀಗಾಗಿ ಇನ್ಮುಂದೆ ರಸ್ತೆ ಮಾರ್ಗ ಸರಿಯಾಗಿ ಇರುವಲ್ಲಿ ಮಾತ್ರ ಅಪಾರ್ಟ್​ಮೆಂಟ್​ ನಿರ್ಮಾಣಕ್ಕೆ ಅವಕಾಶ ನೀಡಬೇಕು ಅನ್ನೋದ್ರ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಹೇಳಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...