ಬೆಂಕಿ ಆಕಸ್ಮಿಕದಂತಹ ಅವಘಡ ಸಂಭವಿಸಿದಾಗ ಹೇಗೆ ಅಪಾಯದಿಂದ ಪಾರಾಗಬೇಕು ಎಂಬುದನ್ನು ಪ್ರಾಯೋಗಿಕವಾಗಿ ಶಿಕ್ಷಕಿಯೊಬ್ಬರು ಮಕ್ಕಳಿಗೆ ಹೇಳಿಕೊಟ್ಟ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಗ್ನಿ ಅವಘಡದಂತಹ ಸಂದರ್ಭದಲ್ಲಿ ಮಕ್ಕಳು ಹೇಗೆ ಸಂಕಷ್ಟದ ಸ್ಥಿತಿಯಿಂದ ಧೈರ್ಯವಾಗಿ ಪಾರಾಗಬೇಕು ಎಂಬುದನ್ನ ಈ ವಿಡಿಯೋದಲ್ಲಿ ಮನದಟ್ಟಾಗುವಂತೆ ಚಿತ್ರಿತವಾಗಿದೆ.
ಏಕಾಏಕಿ ಬೆಂಕಿ ಬಿದ್ದು, ಸೈರನ್ ಕೂಗಲಾರಂಭಿಸುತ್ತದೆ. ತಕ್ಷಣ ಪುಟಾಣಿ ಮಕ್ಕಳು ಕರವಸ್ತ್ರದಲ್ಲಿ ಮುಗು ಮುಚ್ಚಿಕೊಂಡು ಒಬ್ಬೊಬ್ಬರಾಗಿ ಘಟನಾ ಸ್ಥಳದಿಂದ ಹುಷಾರಾಗಿ ಪಾರಾಗುತ್ತಾರೆ.
ತುಂಬಾ ಕ್ಯೂಟ್ ಆಗಿರುವ ಮಕ್ಕಳ ಈ ವಿಡಿಯೋ ಭಾರಿ ವೈರಲ್ ಆಗಿದ್ದು, ಇಂದಿನ ಮಕ್ಕಳಿಗೆ ಇಂತಹ ಉಪಯೋಗಕಾರಿ ಮಾಹಿತಿಗಳನ್ನು ಶಾಲೆಯಲ್ಲಿ ಶಿಕ್ಷಕರು ತಿಳಿಸಿಕೊಡುವುದರಿಂದ ಮುಂದೊಂದು ದಿನ ಅಪಾಯದ ಸಂದರ್ಭದಲ್ಲಿ ಸಹಾಯವಾಗಬಹುದಲ್ಲವೇ?