ಬೆಳಗಾವಿ: ವಿದ್ಯುತ್ ಅವಘಡದಿಂದಾಗಿ ಕಬ್ಬು ಬೆಳೆಗೆ ಬೆಂಕಿ ತಗುಲಿ, ಕಬ್ಬು ಬೆಳೆ ನಾಶ ಪ್ರಕರಣಕ್ಕೆ ಸಂಬಂಧಿಸಿದಂತೆ ರೈತರಿಗೆ ತಕ್ಷಣ ಪರಿಹಾರ ಹಣ ನೀಡುವಂತೆ ಬೆಳಗಾವಿ ಜಿಲ್ಲೆ ಬೈಲಹೊಂಗಲ ಕೋರ್ಟ್ ಹೆಸ್ಕಾಂ ಗೆ ಆದೆಶ ಹೊರಡಿಸಿದೆ.
2022ರ ಫೆ.3ರಂದು ಬೈಲಹೊಂಗಲದ ಹೊಸೂರು ಗ್ರಾಮದ ರೈತ ಮಡಿವಾಳಪ್ಪ ಹೊಂಗಲ ಅವರ್ಗೆಸೇರಿದ 2 ಏಕರೆ 31ಗುಂಟೆ ಹಾಗೂ ಅಡಿವೆಪ್ಪ ಕರಡಿಗುದ್ದಿ ಅವರಿಗೆ ಸೇರಿದ 2 ಏಕರೆ32 ಗುಂಟೆ ಜಮೀನಿನಲ್ಲಿ ಬೆಳದಿದ್ದ ಕಬ್ಬು ಬೆಳೆಗೆ ವಿದ್ಯುತ್ ಅವಘಡದಿಂದ ಸಂಪೂರ್ಣ ನಾಶವಾಗಿತ್ತು. ಸುಮಾರು 400ಟನ್ ಕಬ್ಬು ಬೆಳೆ ಸುಟ್ಟು ಕರಕಲಾಗಿತ್ತು.
ಪರಿಹಾರ ನೀಡುವಂತೆ ಕೋರಿ ರೈತರಿಬ್ಬರೂ ಹೆಸ್ಕಂ ವಿರುದ್ಧ ಬೈಲಹೊಂಗಲ ಕೋರ್ಟ್ ಮೊರೆಹೋಗಿದ್ದರು. ರೈತರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಇಬ್ಬರು ರೈತರಿಗೆ 5 ಲಕ್ಷ 40ಸಾವಿರ ರೂಪಾಯಿಯಂತೆ ಒಟ್ಟು 10ಲಕ್ಷ 80 ಸಾವಿರ ರೂಪಾಯಿ ಪರಿಹಾರ ಧನವನ್ನು 30ದಿನದೊಳಗೆ ಶೇ.6 ರಂತೆ ಬಡ್ಡಿ ಹಾಕಿ ಪರಿಹಾರ ವಿತರಿಸುವಂತೆ ಹೆಸ್ಕಾಂ ಇಲಾಖೆಗೆ ಆದೇಶ ನೀಡಿದೆ.