
ಉತ್ತರ ಮೆಸಿಡೋನಿಯಾದ ನೈಟ್ಕ್ಲಬ್ನಲ್ಲಿ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ 51 ಜನರು ಸಜೀವದಹನಗೊಂಡಿರುವ ಘಟನೆ ನಡೆದಿದೆ
ಉತ್ತರ ಮೆಸಿಡೋನಿಯಾದ ಕೊಕಾನಿ ಪಟ್ಟಣದ ನೈಟ್ಕ್ಲಬ್ನಲ್ಲಿ ಭಾನುವಾರ ಮುಂಜಾನೆ ಈ ದುರಂತ ಸಂಭವಿಸಿದೆ. ಬೆಂಕಿ ಅವಘಡದಲ್ಲಿ 51 ಜನರು ಸಾವನ್ನಪ್ಪಿದ್ದಾರೆ ಮತ್ತು 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಆಂತರಿಕ ಸಚಿವ ಪ್ಯಾನ್ಸ್ ಟೊಸ್ಕೋವ್ಸ್ಕಿ ಹೇಳಿದ್ದಾರೆ.
ಸಂಗೀತ ಕಚೇರಿಯ ಸಮಯದಲ್ಲಿ ಬಳಸಲಾದ “ಪೈರೋಟೆಕ್ನಿಕ್ ಸಾಧನಗಳಿಂದ” ಬೆಂಕಿ ಸಂಭವಿಸಿದೆ ಎಂದು ಸಚಿವರು ತಿಳಿಸಿದ್ದಾರೆ.
ಫೈರೋಟೆಕ್ನಿಕ್ ಸಾಧನದಿಂದ ಉಂಟಾದ ಕಿಡಿಗಳು ಬೆಂಕಿ ಅವಘಡಕ್ಕೆ ಕಾರಣವಗಿದ್ದು, ಬೆಂಕಿಯ ಕೆನ್ನಾಲಿಗೆ ಡಿಸ್ಕೋಥೆಕ್ ನಾದ್ಯಂತ ಹರಡಿದ್ದು, ಏಕಾಏಕಿ ಧಗಧಗನೆ ಹೊತ್ತಿ ಉರಿದಿದೆ. ಪರಿಣಾಮ 51 ಜನರು ಬೆಂಕಿಗಾಹುತಿಯಾಗಿದ್ದಾರೆ.