
ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ ಸಂಜೆ ಕಾಲೇಜಿನಲ್ಲಿ ಕಾಲೇಜು ಶುಲ್ಕ 20 ಲಕ್ಷ ರೂಪಾಯಿ ದುರುಪಯೋಗ ಆರೋಪದಡಿ ದ್ವಿತೀಯ ದರ್ಜೆ ಸಹಾಯಕ ರಾಘವೇಂದ್ರ ಶೆಟ್ಟಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ರಾಘವೇಂದ್ರ ಶೆಟ್ಟಿ ಕಾಲೇಜು ಶುಲ್ಕದ ಹಣ 20 ಲಕ್ಷ ರೂಪಾಯಿಗಳನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಅವ್ಯವಹಾರದ ಬಗ್ಗೆ ಕೇಳಿದಾಗ 4 ಲಕ್ಷ ರೂ. ವಾಪಸ್ ಕೊಟ್ಟಿದ್ದು, ಉಳಿದ ಹಣ ನೀಡದೆ ಮೋಸ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ. ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.