ಬೆಂಗಳೂರು: ರಾಜರಾಜೇಶ್ವರಿ ನಗರದ ವ್ಯಾಪ್ತಿಯಲ್ಲಿ ಆಸ್ತಿ ದಾಖಲೆ ಡಿಜಿಟಲ್ ಸ್ಕ್ಯಾನಿಂಗ್ ಮಾಡುವಾಗ ಅಕ್ರಮ ಎಸಗಿದ ಅಧಿಕಾರಿ ಮತ್ತು ಅಕ್ರಮ ಆಸ್ತಿಯ ಮಾಲೀಕನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಆರ್.ಆರ್. ನಗರ ವಲಯದ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿ ಕಚೇರಿಯಲ್ಲಿ ಎಫ್.ಡಿ.ಎ. ನೌಕರನಾಗಿರುವ ಓಂಕಾರ ಮೂರ್ತಿ ಹಲಗೆವಡೇರಹಳ್ಳಿಯಲ್ಲಿ ರಿಜಿಸ್ಟರ್ ಪುಸ್ತಕ ಡಿಜಿಟಲ್ ಸ್ಕ್ಯಾನಿಂಗ್ ಮಾಡುವ ಸಂದರ್ಭದಲ್ಲಿ ಅಕ್ರಮವಾಗಿ ವ್ಯಕ್ತಿಯೊಬ್ಬರ ಆಸ್ತಿ ವಿವರ ನಮೂದಿಸಿದ್ದಾರೆ. ಈ ಬಗ್ಗೆ ಎ.ಆರ್.ಒ. ಅರುಣ್ ಕುಮಾರ್ ಪರಿಶೀಲನೆ ನಡೆಸಿದಾಗ ಅಕ್ರಮ ನಡೆದಿರುವುದು ಗೊತ್ತಾಗಿದ್ದು, ರಾಜರಾಜೇಶ್ವರಿ ನಗರ ಠಾಣೆಯಲ್ಲಿ ಎಫ್.ಡಿ.ಎ. ಓಂಕಾರ ಮೂರ್ತಿ ಮತ್ತು ಅಕ್ರಮವಾಗಿ ನಮೂದಾದ ಆಸ್ತಿ ಮಾಲೀಕ ಯತಿನ್ ಗೌತಮ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.